ಕುಮಟಾ: ತಾಲ್ಲೂಕಿನ ಹೊಲನಗದ್ದೆಗ್ರಾಮ ಪಂಚಾಯತಿ ವ್ಯಾಪ್ತಿಯ ಹಣ್ಣೆಮಠದಲ್ಲಿ ಕೃಷಿ ಚಟುವಟಿಕೆ ಮಾಡುತ್ತಿರುವ ಸಂದರ್ಭದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಉಪವಿಭಾಗಧಿಕಾರಿ ಅಜಿತ್ ಎಂ .ತಹಶಿಲ್ದಾರ ಮೇಘರಾಜ ನಾಯ್ಕ ಪಿಎಸ್ಐ ಆನಂದಮೂರ್ತಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಾಘವೇಂದ್ರ ಪಟಗಾರ ತೆರಳಿ ಶವವನ್ನು ಪರಿಶೀಲಿಸಿದ್ದಾರೆ.

RELATED ARTICLES  ಮೀನು ತುಂಬಿದ ಲಾರಿಯಲ್ಲಿ ಗೋ ಮಾಂಸ ಸಾಗಾಟ : ಭಟ್ಕಳ ಸಮೀಪ ಪೋಲೀಸರ ಬಲೆಗೆ ಬಿದ್ದ ಇಬ್ಬರು.

ಹಣ್ಣೆಮಠದ ನಿವಾಸಿ ನಾರಾಯಣ ಪಟಗಾರ 55 ವರ್ಷ ಮೃತರು ಇವರು ದಿನನಿತ್ಯ ಗದ್ದೆಯಲ್ಲಿ ಕೃಷಿ ಚಟುವಟಿಕೆ ಮಾಡುತ್ತಿದ್ದು ಇಂದು ಕುಡಾ ಕೃಷಿ ಚಟುವಟಿಕೆ ಮಾಡುತ್ತಿರುವ ಸಂದರ್ಭದಲ್ಲಿ ಹೃದಯಾಘಾತ ಸಂಭವಿಸಿ ಮನೆಯಿಂದ 500 ಮೀಟರ್ ದುರದ ಗದ್ದೆಯಲ್ಲಿ ಮೃತಪಟ್ಟಿದ್ದಾರೆ.

RELATED ARTICLES  ಭಟ್ಕಳದಲ್ಲಿ ನಡೆದ ಬೃಹತ್ ಉದ್ಯೋಗ ಮೇಳ : ಇಂಡಿಯನ್ ನವಾಯತ್ ಫೋರಂ ವತಿಯಿಂದ ಆಯೋಜನೆ.

ಶವವನ್ನು ಕುಮಟಾ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.

ಈ ತನಿಖೆಯನ್ನು ಕುಮಟಾ ಪಿಎಸ್ಐ ಆನಂದಮೂರ್ತಿ ಯವರು ಕೈಗೊಂಡಿದ್ದಾರೆ.