ಕುಮಟಾ : ತಾಲೂಕಿನ ಕೊಂಕಣ ಎಜ್ಯುಕೇಶನ್ ಟ್ಟಸ್ಟನ ಸರಸ್ವತಿ ವಿದ್ಯಾಕೇಂದ್ರದ ವಿದ್ಯಾರ್ಥಿಗಳು 21-08-2017 ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಧಾರೇಶ್ವರದಲ್ಲಿ ನಡೆದ ಹಂದಿಗೋಣ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಹಿರಿಯ ಹಾಗೂ ಕಿರಿಯ ವಿಭಾಗದ ಒಟ್ಟು 39 ಸ್ಪರ್ಧೆಯಲ್ಲಿ ಭಾಗವಹಿಸಿ 36ರಲ್ಲಿ ಪ್ರಥಮ ಸ್ಥಾನ ಹಾಗೂ 2ರಲ್ಲಿ ದ್ವಿತೀಯ ಸ್ಥಾನ ಪಡೆದು ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ಕಿರಿಯರ ವಿಭಾಗದ ಸ್ಪರ್ಧೆಯಲ್ಲಿ ಶ್ರೇಯಾ ಜಿ. ಹೆಬ್ಬಾರ -ಕನ್ನಡ ಮತ್ತು ಸಂಸ್ಕøತ ಕಂಠಪಾಠ ಲಘುಸಂಗೀತ, ಸೃಜನಾ ಡಿ ನಾಯ್ಕ-ಇಂಗ್ಲೀಷ ಕಂಠಪಾಠ, ಕಥೆ ಹೇಳುವುದು,ಅಭಿನಯ ಗೀತೆ ಹಾಗೂ ಭಕ್ತಿ ಗೀತೆಯಲ್ಲಿ ಪ್ರಥಮ , ಕನ್ನಿಕಾ ಆರ್ ಭಟ್ಟ-ಹಿಂದಿ ಕಂಠಪಾಠ, ಅದಿತಿ ಪ್ರಭು-ಮರಾಠಿ ಕಂಠಪಾಠ, ಅಮೃತಾ ಕಲಭಾಗ – ಕೊಂಕಣಿ ಕಂಠಪಾಠ .ಹರ್ಷಿತಾ ಭಟ್ಟ-ಸಂಸ್ಕøತ ಕಂಠಪಾಠ, ಶ್ರಾವಣಿ ಪೂಜೇರಿ-ಛದ್ಮವೇಷ, ವಿಘ್ನೇಶ ಹೊಸಮನೆ-ಚಿತ್ರಕಲೆ , ಜೀವನ ನಾಯ್ಕ-ಕ್ಲೇಮಾಡಲಿಂಗ್ ,ಸ್ನೇಹಾ ಯು ನಾಯ್ಕ-ಆಶುಭಾಷಣದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಹಿರಿಯರ ವಿಭಾಗದಲ್ಲಿ ಅಕ್ಷತಾ ಎಸ್ ಭಟ್ಟ-ಕನ್ನಡ ಕಂಠಪಾಠ, ಗ್ಲೋರಿಯಾ ಫರ್ನಾಂಡಿಸ – ಇಂಗ್ಲೀಷ ಕಂಠಪಾಠ, ವೈಷ್ಣವಿ ವಿ ಸಭಾಹಿತ-ಸಂಸ್ಕøತ ಕಂಠಪಾಠ , ಅಕ್ಷತಾ ವಿ ಶಾನಭಾಗ – ಮರಾಠಿ ಕಂಠಪಾಠ, ರಾಹುಲ್ ಆರ್ ಶಾನಭಾಗ – ಕೊಂಕಣಿ ಕಂಠಪಾಠ ,ಸ್ಮøತಿ ಶಾನಭಾಗ -ಸಂಸ್ಕøತ ಪಠಣ, ರಾಹುಲ್ ಆರ್ ಶಾನಭಾಗ -ಲಘು ಸಂಗೀತ , ರಕ್ಷಾ ಆರ್ ನಾಯಕ-ಛದ್ಮವೇಷ, ಶ್ರೀರಾಮ ಜಿ ಪಟಗಾರ – ಚಿತ್ರಕಲೆ , ಶುಭಾ ವಿ. ನಾಯ್ಕ –ಕಥೆ ಹೇಳುವುದು ಮತ್ತು ಅಭಿನಯ ಗೀತೆ, ಉಜ್ವಲ್ ಅನಿಲ ನಾಯ್ಕ –ಕ್ಲೇ ಮಾಡಲಿಂಗ್ , ಆಶ್ರೀತಾ ಜಿ ಭಟ್ಟ – ಭಕ್ತಿ ಗೀತೆ , ಚಂದನ ಹೆಗಡೆ –ಆಶುಭಾಷಣದಲ್ಲಿ ಪ್ರಥಮ ಸ್ಥಾನವನ್ನು ಪಡೆದು ಕೊಂಡಿದ್ದಾರೆ.
ಚಂದನ ಹೆಗಡೆ ,ವಿಶೇಷ ಕಾಮತ್, ರಸಪ್ರಶ್ನೆಯಲ್ಲಿ ಹಾಗೂ ಪೂರ್ವಿ ನಾಯ್ಕ ,ಇಂಚರಾ ಭಂಡಾರಿ, ನಿತ್ಯಾ ದಿಂಡೆ ಸ್ಪಂದನಾ ನಾಯ್ಕ ,ಸೃಜನಾ ನಾಯ್ಕ ಮಯೂರಿ ಗೋಯತ್ ಕಿರಿಯರ ಜಾನಪದ ,ನೃತ್ಯ, ಶ್ರೇಯಾ ಹರಿಕಂತ್ರ,ಖುಷಿ ನಾಯ್ಕ ,ಮಾನ್ಯ ಹರಿಕಾಂತ ವಿಭಾ ವಿ ನಾಯ್ಕ ,ಶುಭಾ ವಿ. ನಾಯ್ಕ ದೀಪಿಕಾ ಡಿ ವೆಂಗುರ್ಲೇಕರ ಹಿರಿಯರ ಜಾನಪದ ನೃತ್ಯದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ವಿಭಾ ನಾಯ್ಕ ಹಿರಿಯರ ಹಿಂದಿ ಕಂಠಪಾಠ ಹಾಗೂ ಕನ್ನಿಕಾ ಭಟ್ಟ, ಪೂರ್ವಿ ಜೈನ್,ದೀಕ್ಷಾ ನಾಯ್ಕ ವೃದ್ಧಿ ಜೈನ್ ಗಾಯನಾ ಪಟಗಾರ ,ವಿನುತಾ ನಾಯ್ಕ ಕಿರಿಯರ ಕೋಲಾಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಇವರ ಸಾಧನೆಗೆ ಶಾಲಾ ಮುಖ್ಯ ಶಿಕ್ಷಕರಾದ ಸುಜಾತಾ ನಾಯ್ಕ ಹಾಗೂ ಆಡಳಿತ ಮಂಡಳಿಯವರು ಅಭಿನಂದನೆ ಸಲ್ಲಿಸಿದ್ದಾರೆ. ಶಾಲಾ ಸಾಂಸ್ಕøತಿಕ ಸಮಿತಿಯ ಗಣೇಶ ಜೋಶಿ ,ಪ್ರಜ್ಞಾ ನಾಯ್ಕ ,ಗೌರೀಶ ಭಂಡಾರಿ ಈ ಎಲ್ಲಾ ಸಾಧನೆಯ ಹಿಂದೆ ಸಹಕಾರ ನೀಡಿ ಸಾಧನೆಗೆ ಕಾರಣರಾದ ಎಲ್ಲ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅಭಿವಂದನೆ ಸಲ್ಲಿಸಿ ಮುಂಬರುವ ಕುಮಟಾ ತಾಲೂಕಾ ಮಟ್ಟದ ಸ್ಪರ್ಧೆಗೆ ಶುಭ ಕೋರಿದ್ದಾರೆ.