ಹೊನ್ನಾವರ: ಜಿಲ್ಲಾ ಕಾಂಗ್ರೆಸ್ ಸಮಿತಿ ಉತ್ತರ ಕನ್ನಡ ಹಾಗೂ ಬ್ಲಾಕ್ ಕಾಂಗ್ರೆಸ್ ಹೊನ್ನಾವರ ಇದರ ವತಿಯಿಂದ, ಕೊರೋನಾ ವಿರುದ್ಧ ನಮ್ಮ ರಕ್ಷಣೆಗೆ ಹಗಲಿರುಳೆನ್ನದೆ ಶ್ರಮಿಸುತ್ತಿರುವ ಹೊನ್ನಾವರ ಸಾರ್ವಜನಿಕ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳಿಗೆ ಕ್ಷೇತ್ರದ ಮಾಜಿ ಶಾಸಕಿಯರಾದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ಕಿಟ್ ವಿತರಿಸಿ, ಅವರ ಸೇವೆಗೆ ಹೃದಯಪೂರ್ವಕವಾಗಿ ಅಭಿನಂದಿಸಿದರು ..
ಈ ಸಂದರ್ಭದಲ್ಲಿ ಮುಖಂಡರುಗಳಾದ ರವಿಕುಮಾರ್ ಎಂ.ಶೆಟ್ಟಿ, ವಿನಾಯಕ ಶೇಟ್ , ವಿ.ಎಲ್ .ನಾಯ್ಕ, ಗಣಪತಿ ಮೇಸ್ತ, ಕೇಶವ ಮೇಸ್ತ, ವಿನಯಾ ಜಾರ್ಜ್, ರವಿ ಗೌಡ, ಸಚಿನ್ ನಾಯ್ಕ ನಾಯ್ಕ, ಗಣಪತಿ ಶೆಟ್ಟಿ, ಮನೋಜ ನಾಯಕ್, ನಿತ್ಯಾನಂದ ನಾಯ್ಕ, ಸುನಿಲ್ ನಾಯ್ಕ, ಮುಂತಾದವರು ಹಾಜರಿದ್ದರು…