ಸೆಕೆಗಾಲದಲ್ಲಿ ಕೆಮ್ಮುಂಡೆ ಹಣ್ಣು ತಿನ್ನಲು ಬಹಳ ಖುಶಿ ನೀರಿನ ಅಂಶ ಸಕತ್ತಾಗಿರುವ ಈ ಹಣ್ಣು
ದಾಹ ನೀಗಿಸುವದರೊಂದಿಗೆ
ದೇಹವನ್ನು ಹೊಟ್ಟೆಯನ್ನು ತಂಪಾಗಿಸುತ್ತದೆ ನಾವು ಕೆಮ್ಮುಂಡೆ ಹಣ್ಣಿನ ಕೆಂಪು ತಿರಳನ್ನು ತಿಂದು ಬೀಜ ಬಿಳಿಭಾಗ ಸಿಪ್ಪೆಸಹಿತ ಬೀಸಾಡುತ್ತೇವೆ ಅದರೆ ಇದರಲ್ಲಿ
ಕೂಡ ಪೋಷಕಾಂಶಗಳಿದ್ದು
ಅರೋಗ್ಯಕ್ಕೆ ಹಿತಕಾರಿಯಾಗಿದೆ
ಹಾಗಾದರೆ ಕೆಮ್ಮುಂಡೆ ಹಣ್ಣಿನ
ಬಿಳಿಭಾಗ ಸಿಪ್ಪೆ ಬೀಜಗಳ
ಪದಾರ್ಥ ಹೇಗೆ ಮಾಡುವದೆಂದು ನೋಡೋಣ
ಬೀಜದ ತಂಬುಳಿ
ಬೇಕಾಗುವ ಸಾಮಾಗ್ರಿ
ಬೀಜ. ಅರ್ದ ಕಪ್
ಕಾಳುಮೆಣಸು ಐದು ಅರು
ಜೀರಿಗೆ ಒಂದು ಚಮಚ
ಕಾಯಿತುರಿ ಅರ್ದ ಕಪ್
ಮಜ್ಜಿಗೆ ಒಂದು ಕಪ್ ಉಪ್ಪು ರುಚಿಗೆ
ಒಗ್ಗರಣೆ
ಇಂಗು ಚಿಟಿಕೆ
ಕರಿಬೇವು ಸ್ವಲ್ಪ
ಸಾಸಿವೆ ಒಂದು ಚಮಚ
ಒಣಮೆಣಸು ಒಂದು
ಎಣ್ಣೆ ಒಂದು ಚಮಚ
ಮಾಡುವ ವಿಧಾನ
ಮೊದಲು ಮಿಕ್ಸಿ ಜಾರಿಗೆ ಬೀಜ
ಕಾಳುಮೆಣಸು ಜೀರಿಗೆ ಕಾಯಿತುರಿ ನೀರು ಸೇರಿಸಿ ರುಬ್ಬಿ ಮಿಶ್ರಣವನ್ನು ಸ್ವಲ್ಪ ನೀರು ಸೇರಿಸಿ ಸೋಸಿ
ಅದಕ್ಕೆ ಮಜ್ಜಿಗೆ ಉಪ್ಪು ಸೇರಿಸಿ
ಒಗ್ಗರಣೆ ಹುಟ್ಟಿಗೆ ಎಣ್ಣೆ ಹಾಕಿ
ಸಾಸಿವೆ ಒಣಮೆಣಸಿನ ತುಂಡು
ಕರಿಬೇವು ಇಂಗು ಹಾಕಿ ಒಗ್ಗರಣೆ ಬೇಯಿಸಿ ತಂಬುಳಿಗೆಹಾಕಿ ಕೈಯಿಂದ ಒಣಮೆಣಸು ತಿಕ್ಕಿ ರುಚಿಕರ ಅರೋಗ್ಯಕರ ತಂಬುಳಿರೆಡಿ
ಅನ್ನಕ್ಕೆ ಬಹಳ ಸೂಪರ್ ಮಾಡಿಸಿದ್ದು?
ಬಿಳಿ ಭಾಗದ ಹುಳಿ
ಬೇಕಾಗುವ ಸಾಮಾಗ್ರಿ
ಬಿಳಿ ಹೋಳುಗಳು
ತೊಗರಿಬೇಳೆ ಒಂದು ಕಪ್
ತೆಂಗಿನ ತುರಿ ಒಂದೂವರೆ ಕಪ್
ಕುತ್ತುಂಬ್ರಿ ಬೀಜ. ಎರಡು ಚಮಚ
ಜೀರಿಗೆ ಒಂದು ಚಮಚ
ಸಾಸಿವೆ ಒಂದುಚಮಚ
ಮೆಂತ್ಯ ಅರ್ದ ಚಮಚ
ಒಣಮೆಣಸು ಐದು
ಹುಣಸೆ ಹಣ್ಣು ಸ್ವಲ್ಪ
ಉಪ್ಪು ರುಚಿಗೆ
ಒಗ್ಗರಣೆ
ಎಣ್ಣೆ
ಸಾಸಿವೆ
ಕರಬೇವು
ಇಂಗು
ಮಾಡುವ ವಿಧಾನ
ಮೊದಲು ಕುಕ್ಕರಿಗೆ ಹೋಳು
ಬೇಳೆ ಸೇರಿಸಿ ಬೇಯಿಸಿ
ಮಿಕ್ಸಿಜಾರಿಗೆ ಹಸಿ ಕೊತ್ತಂಬರಿ ಬೀಜ ಜೀರಿಗೆ ಸಾಸಿವೆ ಮೆಂತ್ಯ
ಹುಣಸೆ ಹಣ್ಣು ಕಾಯಿತುರಿ ಹಾಕಿ ರುಬ್ಬಿರಿ ಬೇಯಿಸಿದ ಬೇಳೆ ಹೋಳಿಗೆ ರುಬ್ಬಿದ ಮಿಶ್ರಣ ಸೇರಿಸಿ ಬೇಕಾದಷ್ಟು ನೀರು ಸೇರಿಸಿ ಕುದಿಸಿ ಉಪ್ಪು ರುಚಿಗೆ
ಸೇರಿಸಿ ಕುದಿಯುತ್ತಿರುವಾಗ ಹೇಳಿದ ಸಾಮಾಗ್ರಿ ಸೇರಿಸಿ ಒಗ್ಗರಣೆ ಕೊಟ್ಟು ಇಳಿಸಿ
ಅನ್ನಕ್ಕೆ ಹೇಳಿ ಮಾಡಿಸಿದ್ದು?
ಹಸಿರು ಸಿಪ್ಪೆ ಚಟ್ನಿ
ಬೇಕಾಗುವ ಸಾಮಾಗ್ರಿ
ಸಿಪ್ಪೆ ಕತ್ತರಿಸಿದ್ದು
ಹುಣಸೆ ಹಣ್ಣು ಸ್ವಲ್ಪ
ಕಾಯಿತುರಿ ಒಂದು ಕಪ್
ಒಣಮೆಣಸು ಐದು
ಕುತ್ತುಂಬರಿ ಬೀಜ ಒಂದು ಚಮಚ
ಸಾಸಿವೆ ಒಂದು ಚಮಚ
ಬೆಳ್ಳುಳ್ಳಿ ಐದು ಎಸಳು
ಉಪ್ಪು
ಮಾಡುವ ವಿಧಾನ
ಮೊದಲು ಬಂಡಿಗೆ ಎಣ್ಣೆ ಒಂದು ಚಮಚ ಹಾಕಿ ಬೆಳ್ಳುಳ್ಳಿ ಕುತ್ತುಂಬರಿ ಬೀಜ ಸಾಸಿವೆ ಒಣಮೆಣಸು ಹಾಕಿ ಹುರಿಯಿರಿ
ಬೆಂದಮೇಲೆ ಕತ್ತರಿಸಿದ ಸಿಪ್ಪೆ ಹಾಕಿ ಹುರಿಯಿರಿ ಅದಕ್ಕೆ ನೀರು ಸೇರಿಸಿ ಬೇಯಿಸಿ ಬೇಯುವಾಗ
ಹುಣಸೆಹಣ್ಣು ಉಪ್ಪು ಸೇರಿಸಿ
ತಣಿದ ಮೇಲೆ ಕಾಯಿತುರಿಯೊಂದಿಗೆ ಬೆಂದ ಮಿಶ್ರಣ ಸೇರಿಸಿ ರುಬ್ಬಿ
ಚಟ್ನಿಗೆ ಸಾಸಿವೆ ಇಂಗು ಕರಿಬೇವಿನ ಒಗ್ಗರಣೆ ಎಣ್ಣೆಯ ಜೊತೆ ಹಾಕಿ
ಅನ್ನ ದೋಸೆ ಇಡ್ಲಿ ಎಲ್ಲದಕ್ಕೂ ಸೈ
ಕಲ್ಪನಾಅರುಣ