ಹೊನ್ನಾವರ;ಪ್ರಭಾತನಗರದ ಪಾರೆಸ್ಟ್ ಕಾಲೊನಿಯಲ್ಲಿರುವ ಲಾಯನ್ಸ್ ವಿದ್ಯಾಭವನಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಮುದ್ದು ಕೃಷ್ಣ – ಮುದ್ದು ರಾಧೆ ಸ್ಪರ್ಧೆಯನ್ನು ಲಾಯನ್ಸ್ ಕ್ಲಬ್ ಅಧ್ಯಕ್ಷ ಲಾಯನ್ ದೇವಿದಾಸ ಮಡಿವಾಳ ಉದ್ಘಾಟಿಸಿದರು. ಡಿಸ್ಟ್ರಿಕ್ಟ್ ಚೆರಪರ್ಸನ್ ಲಾಯನ್ ಎನ್.ಜಿ. ಭಟ್ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು.
ಸ್ಪರ್ಧೆಯಲ್ಲಿ 1 ರಿಂದ 4 ವರ್ಷದ ಮಕ್ಕಳಿಗೆ ಹಾಗೂ 5 ರಿಂದ 8 ವರ್ಷದ ಮಕ್ಕಳಿಗೆ ಪ್ರತ್ಯೇಕವಾಗಿ ಮುದ್ದು ಕೃಷ್ಣ – ಮುದ್ದು ರಾಧೆಯ 4 ಗುಂಪುಗಳಾಗಿ ಸ್ಪರ್ಧೆಯನ್ನು ಏರ್ಪಡಿಸಿ ವಿಜೇತರಿಗೆ ಪ್ರಮಾಣ ಪತ್ರದ ಜೊತೆಗೆ ಪಾರಿತೋಷಕ ಹಾಗೂ ಸ್ಪರ್ಧಿಸಿದ ಎಲ್ಲಾ ಮಕ್ಕಳಿಗೂ ಪಾರಿತೋಷಕ ನೀಡಲಾಯಿತು. ಸ್ಪರ್ಧೆಯಲ್ಲಿ 75 ಮುದ್ದು ಚಿಣ್ಣರು ಭಾಗವಹಿಸಿ ಸಂಭ್ರಮಿಸಿದರು.
ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಲಾಯನ್ ಪ್ರದೀಪ ಶೆಟ್ಟಿ, ಖಜಾಂಚಿ ಲಾಯನ್ ಎಮ್.ವಿ. ನಾಯ್ಕ, ರಿಜನ್ ಚೆರ್‍ಪರ್ಸನ್ ಲಾಯನ್ ಜಿ.ವಿ ಬಿಂದಗಿ, ಲಾಯನ್ ಜೀವೋತ್ತಮ ನಾಯ್ಕ, ಲಾಯನ್ ವಸಂತ ಪ್ರಭು, ಲಾಯನ್ ಸುರೇಶ ಎಸ್, ಲಾಯನ್ ಶೇಖರ ನಾಯ್ಕ, ಲಾಯನ್ ಸಂತೋಷ ನಾಯ್ಕ, ಲಾಯನ್ ಟಿ.ಜೆ. ಗೌಡ, ಮಕ್ಕಳ ಪಾಲಕರು, ಊರ ನಾಗರಿಕರು ಹಾಜರಿದ್ದರು. ಲಾಯನ್ ಹರೀಶ ನಾಯ್ಕ, ಲಾಯನ್ ರಾಜೇಶ ಸಾಲೆಹಿತ್ತಲ, ಲಾಯನ್ ವಿಕ್ರಮ ನಾಯ್ಕ ಇವರು ಕಾರ್ಯಕ್ರಮದ ಪಾಯೋಜಕತ್ವ ವಹಿಸಿದ್ದರು.