ಗೋಕರ್ಣ : ಲಾಕ್‌ಡೌನ್ ಇದ್ದರೂ ಬೆಂಗಳೂರಿನ ಕುಟುಂಬದಿಂದ ಗೋಕರ್ಣದಲ್ಲಿ ಪಿತೃಕಾರ್ಯನಡೆದ ಬಗ್ಗೆ ವರದಿಯಾಗಿದೆ.

ಬೆಂಗಳೂರು ಮೂಲದ ಕುಟುಂಬವೊಂದು.
ಕಾನೂ‌ನು ನಿಯಮ ಗಾಳಿಗೆ ತೂರಿ
ಪಿತೃಕಾರ್ಯ ಮಾಡಿಸಿಕೊಂಡ ಬಗ್ಗೆ ವರದಿಯಾಗಿದೆ‌.

ರೋಡ್ ಪರ್ಮಿಶನ್ ಪಡೆದುಕೊಂಡು ಬೆಂಗಳೂರಿನಿಂದ ಬಂದ 7 ಜನರಿರುವ ಫ್ಯಾಮಿಲಿ ನಿನ್ನೆರಾತ್ರಿ ಗೋಕರ್ಣಕ್ಕೆ ತಲುಪಿ ಇಂದು ಬೆಳ್ಳಂಬೆಳಗ್ಗೆ ಪಿತೃ ಕಾರ್ಯ ಪೂರೈಸಿದ್ದಾರೆ ಎನ್ನಲಾಗಿದೆ.

ಬೆಂಗಳೂರು ಕುಟುಂಬದ ಪಿತೃಕಾರ್ಯ ನಡೆಸಿದ ಗೋಕರ್ಣದ ಅರ್ಚಕ ಚಿಂತಾಮಣಿ ಉಪಾಧ್ಯ ಎಂಬುದಾಗಿ ಅಧಿಕಾರಿವರ್ಗ ಮಾಹಿತಿ ನೀಡಿದೆ.

RELATED ARTICLES  ರಸಾಯನಶಾಸ್ತ್ರ ರಾಷ್ಟ್ರೀಯ ವೆಬಿನಾರ್ ಕಾರ್ಯಕ್ರಮ ಯಶಸ್ವಿ

ಕಾನೂನು ಉಲ್ಲಂಘಿಸಿ ಗೋಕರ್ಣದಲ್ಲಿ ಪಿತೃಕಾರ್ಯ ನಡೆಸಿದ ಅರ್ಚಕ ಬೆಂಗಳೂರಿನ ಕುಟುಂಬವನ್ನು ಮನೆಗೆ ಕರೆಯಿಸಿಕೊಂಡು ಕರ್ಮಾಂಗ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ.

ಈ ವಿಚಾರ ಕುರಿತು ಸ್ಥಳೀಯ ಗ್ರಾಮ ಪಂಚಾಯತ್‌ನಲ್ಲಿ ಗಂಭೀರ ಸಭೆ ನಡೆದಿದ್ದು. ಅಧಿಕಾರಿಗಳು ಹಾಗೂ ಗ್ರಾ.ಪಂ. ಸದಸ್ಯರಿಂದ ಸಭೆ ನಡೆಸಿ ಎರಡೂ ಕುಟುಂಬಗಳ ವಿರುದ್ಧ ಕ್ರಮಕ್ಕೆ ಚಿಂತನೆ ನಡೆದಿದೆ ಎನ್ನಲಾಗಿದೆ.

ಸದ್ಯಕ್ಕೆ ಚಿಂತಾಮಣಿ ಉಪಾಧ್ಯರ ಮನೆಯಲ್ಲೇ ಬೆಂಗಳೂರು ಕುಟುಂಬಕ್ಕೆ ಹೋಂ ಕ್ವಾರಂಟೈನ್ ವಿಧಿಸಲಾಗಿದೆ. ಚಿಂತಾಮಣೊ ಉಪಾಧ್ಯರ ಸಹಿತ ಅವರ ಫ್ಯಾಮಿಲಿಗೂ ಹೋಂ ಕ್ವಾರಂಟೈನ್ ನಲ್ಲಿ ಇಡಲಾಗಿದೆ.

RELATED ARTICLES  ಮಾರುತಿ ಗೌಡರಿಗೆ ಚೇಂಜ್ ಮೇಕರ್ ಪ್ರಶಸ್ತಿ

ಕಾನೂನು ನಿಯಮ ಮೀರಿದ್ದಕ್ಕೆ ಎರಡೂ ಫ್ಯಾಮಿಲಿ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಕುಮಟಾ ಉಪ ವಿಭಾಗಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಎಲ್ಲೆಡೆ ಲಾಕ್ ಡೌನ್ ಇರುವ ಕಾರಣ ಮನೆಯಲ್ಲಿಯೇ ಇದ್ದು ಎಲ್ಲರೂ ಆರೋಗ್ಯ ಕಾಪಾಡಿಕೊಳ್ಳಲು ಅಧಿಕಾರಿಗಳು ಮಾನವಿ ಮಾಡಿದ್ದಾರೆ.