ಹೊನ್ನಾವರ : ಹಿಂದು ಜನಜಾಗೃತಿ ಸಮಿತಿ ವತಿಯಿಂದ ರಾಷ್ಟೀಯ ಹಿಂದೂ ಆಂದೋಲನ ದ ನಿಮಿತ್ತ
ಹೊನ್ನಾವರದ ತಹಶೀಲ್ದಾರ ಕಛೇರಿಯ ಎದುರಿನಲ್ಲಿ ಅಗಸ್ಟ್ 22 ರಂದು ಬೆಳಿಗ್ಗೆ 11-00 ಕ್ಕೆ ಮನವಿಯನ್ನು ಸಲ್ಲಿಸಲಾಯಿತು.
ಮನವಿಯಲ್ಲಿರುವ ಬೇಡಿಕೆಗಳು:
1.ಹನುಮಂತನ ರೂಪದಲ್ಲಿ ಸಲಿಂಗ ವ್ಯಕ್ತಿಯನ್ನು ನಗ್ನವಾಗಿ ತೋರಿಸಿ ಹಿಂದೂಗಳ ಭಾವನೆಗೆ ನೋವು ಉಂಟು ಮಾಡಿದ “ಕಾ ಬಾಡಿಸ್ಕೇಪ್” ಎಂಬ ಚಲನಚಿತ್ರವನ್ನು ನಿಷೇದಿಸಬೇಕೆಂದು
2.ಅಹಂಕಾರಿ ಚೀನಾಗೆ ಪಾಠಕಲಿಸಲು ನಾಗಪುರ್ ಮೆಟ್ರೋಗೊಸ್ಕರ ರೈಲು ಡಬ್ಬಿಯ ನಿರ್ಮಾಣ ಸಂಬಂದ ಚೀನಾದ ಬಿಡ್ ಅನ್ನು ರದ್ದು ಪಡಿಸಬೇಕೆಂದು
3. ಚೀನಾದ ವಸ್ತುಗಳನ್ನು ನಿಷೇದಿಸಬೇಕಂದು
4. ಜಾಕೀರ್ ನಾಯ್ಕ ನ ಫೇಸ್ ಬುಕ್ ಖಾತೆಯನ್ನು ನಿಷೇದಿಸಬೇಕೆಂದು
ತಹಶೀಲ್ದಾರರಿಗೆ ಮನವಿಯನ್ನು ಸಲ್ಲಿಸಲಾಯಿತು.

RELATED ARTICLES  ಸರಕಾರಿ ಪದವಿ ಪೂರ್ವ ಕಾಲೇಜು ಹಿರೇಗುತ್ತಿಯಲ್ಲಿ ಜರುಗಿದ “ಪ್ರತಿಭಾ ಪುರಸ್ಕಾರ”

ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಸೌ. ವಾಸಂತಿ ಮುರ್ಡೇಶ್ವರ, ದೇವಿದಾಸ ಮಡಿವಾಳ, ವಿವೇಕ ಶೇಟ, ಚಂದ್ರಶೇಖರ ಮೇಸ್ತ ಹಾಗೂ ಇತರ ಕಾರ್ಯಕರ್ತರು ಉಪಸ್ಥಿತರಿದ್ದರು.

RELATED ARTICLES  ರೋಹಿಂಗ್ಯಾ ಮುಸಲ್ಮಾನರನ್ನ ದೇಶದಿಂದ ಗಡಿಪಾರಿಗೆ ಆಗ್ರಹಿಸಿ ಮನವಿ.