ಶಿರಸಿ: ಕೊವಿಡ್ ಸಮಯದಲ್ಲಿ ಭಟ್ಕಳದಿಂದ ನಿಯಮ ಬಾಹಿರವಾಗಿ ಶಿರಸಿಗೆ ಆಗಮಿಸಿದ್ದ ಹಾಗೂ ಅವನನ್ನು ಕರೆ ತರಲು ಸಹಕರಿಸಿದ ಲಾರಿ ಚಾಲಕನನ್ನು ಬಂಧಿಸಿ, ಪ್ರಕರಣ ದಾಖಲಿದ ಘಟನೆ ನಗರದಲ್ಲಿ ಜರುಗಿದೆ.
ಭಟ್ಕಳದ ಗುಲಮಿಯ ಮುಷ್ತಾಕ್ ಅಲಿ ಬಾಶಾ ಸಾಬ್ ಹಾಗೂ ಶಿರಸಿಯ ಲಾರಿ ಚಾಲಕ ವಸಂತ ನಾಯ್ಕ ಬಂಧಿತ ಆರೋಪಿಗಳಾಗಿದ್ದಾರೆ. ಕೊವೀಡ್ ನಿಂದ ಜಿಲ್ಲೆಯಲ್ಲಿ ಸೆ.144 ಜಾರಿಯಲ್ಲಿದ್ದರೂ ಸಹ ಲಾರಿ ಚಾಲಕ ಅಕ್ರಮವಾಗಿ ಭಟ್ಕಳದ ವ್ಯಕ್ತಿಯನ್ನು ಕರೆ ತಂದಾಗ ಪೊಲೀಸರು ಆರೋಪಿಗಳನ್ನು ದಸ್ತಗೀರಿ ಮಾಡಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.