ಕುಮಟಾ: ಹೆಗಡೆ ಗ್ರಾ.ಪಂ. ವ್ಯಾಪ್ತಿಯ ಲುಕ್ಕೇರಿ ಗ್ರಾಮದ ಎರಡು ಪಾಳು ಬಿದ್ದ ಕೆರೆಗಳ ಅಭಿವೃದ್ಧಿ ಕಾಮಗಾರಿಗೆ ಕಾಂಗ್ರೆಸ್ ಟಾಸ್ಕ್‌ಫೋರ್ಸ್ ಸಮಿತಿಯ ತಾಲೂಕಾಧ್ಯಕ್ಷ ಹಾಗೂ ಜಿ.ಪಂ ಸದಸ್ಯ ರತ್ನಾಕರ ನಾಯ್ಕ ವೈಯಕ್ತಿಕ ಆರ್ಥಿಕ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ತಾಲೂಕಿನ ಹೆಗಡೆಯ ಲುಕ್ಕೇರಿಯ ಬೊಮ್ಮನಮನೆ ದೇವಸ್ಥಾನದ ಕೆರೆಯು ಸರಿಯಾದ ನಿರ್ವಹಣೆಯಿಲ್ಲದ ಕಾರಣ ಕುಸಿಯುವ ಹಂತ ತಲುಪಿದ್ದು, ಅಲ್ಲಿಯೇ ಸಮೀಪದ ಕಬ್ಬಿನಗದ್ದೆ ಕೆರೆಯೂ ಕೆಲ ವರ್ಷಗಳಿಂದ ಹೂಳು ತುಂಬಿ ಪ್ರಯೋಜನಕ್ಕೆ ಬಾರದಂತಿತ್ತು. ಈ ಕೆರೆಗಳ ಅಭಿವೃದ್ಧಿ ಕಾರ್ಯ ನಡೆದರೆ ಸುತ್ತಮುತ್ತಲಿನ ಪ್ರದೇಶಗಳ ಅಂತರ್ಜಲ ಮಟ್ಟ ಏರಿಕೆಯಾಗುವುದರ ಜೊತೆಗೆ ಸ್ಥಳೀಯರು ಕೆರೆಯ ನೀರನ್ನು ಬಳಸಿಕೊಳ್ಳಬಹುದಾಗಿದೆ ಎಂಬ ಉದ್ದೇಶದಿಂದ ಗ್ರಾಮದ ಯುವಕರು ಕೆರೆಯ ಅಭಿವೃದ್ಧಿ ಕಾರ್ಯಕ್ಕೆ ಮುಂದಾಗಿದ್ದಾರೆ.