ಕಾರವಾರ : ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದಿಂದ ಮೀನುಗಾರರ ೬೦ಲಕ್ಷ ೫೭೯೩೯ ಸಾಲ ವನ್ನಾ ಮಾಡಲಾಗಿದೆ ಎಂದು ಬುಧವಾರ ಭಟ್ಕಳದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ನಿಗಮದ ಅಧ್ಯಕ್ಷ ರಾಜೇಂದ್ರ ನಾಯ್ಕ ಹೇಳಿದರು.
ಭಟ್ಕಳ ಬ್ಕಾಕ ಕಾಂಗ್ರೇಸ್ ಕಾರ್ಯಲಯದಲ್ಲಿ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅದ್ಯಕ್ಷರಾದ ರಾಜೇಂದ್ರ ನಾಯ್ಕ ಪತ್ರಿಕಾಗೋಷ್ಠಿಯಲ್ಲಿ ಕಳೆದ ಆಡಳಿತ ಮಂಡಳಿ ಸಭೆಯಲ್ಲಿ ಉತ್ತರಕನ್ನಡ ಜಿಲ್ಲೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಆರ್ಥಿಕವಾಗಿ ಸಂಕಷ್ಟದಲ್ಲಿದ್ದು ತೊಂದರೆ ಪಡುತ್ತಿರುವ ಬಡ ಮೀನುಗಾರರ ೬೦ಲಕ್ಷ ೫೭೯೩೯ ಸಾವಿರ ಮೀನುಗಾರರ ಸಾಲ ಮನ್ನಾ ಮಾಡಿದ್ದೇವೆ ಎಂದು ತಿಳಿಸಿದರು. ೪೭ ವರ್ಷಗಳ ನಿಗಮದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿ ಸಾಲ ಮನ್ನಾವಾಗಿದೆ ಅದರಲ್ಲಿ ನಮ್ಮ ಉತ್ತರ ಕನ್ನಡ ಜಿಲ್ಲೆಯ ೪೧ ಮೀನುಗಾರರ ೩೫ ಲಕ್ಷ ೧೩೮೭೨ ಸಾವಿರ ಸಾಲ ಮನ್ನಾ ಮಾಡಲಾಗಿದೆ ಎಂದರು. ಹಾಗೂ ನಿಗಮ ೨೦೧೬-೧೭ನೇ ಸಾಲಿನಲ್ಲಿ ೪ ಕೋಟಿ ೩೮ ಲಕ್ಷ ರೂ. ಲಾಭದಲ್ಲಿ ಬಂದಿದ್ದು ಸರಕಾರಕ್ಕೆ ೧೭ ಲಕ್ಷ ಡಿವಿಡೆಂಟ ತುಂಬಿರುತ್ತದೆ ಎಂದರು. ಈ ಸಂದರ್ಭದಲ್ಲಿ ಬಾಕ್ಲ ಕಾಂಗ್ರೇಸ್ ಅಧ್ಯಕ್ಷ ವಿಠ್ಠಲ ನಾಯ್ಕ, ಜಿಲ್ಲಾ ಪಂಚಾಯತ ಅಧ್ಯಕ್ಷೆ ಜಯಶ್ರೀ ಮೊಗೇರ, ಕೆ,ಎಪ್,ಡಿಸಿ ನಿದೇಶಕ ರಾಮಾ ಮೊಗೇರ, ಭಟ್ಕಳ ತಾಲೂಕು ಪಂಚಾಯತ ಅಧ್ಯಕ್ಷ ಈಶ್ವರ ನಾಯ್ಕ, ಉಪಾದ್ಯಕ್ಷ ರಾಧಾ ವೈದ್ಯ, ತಾಲೂಕ ಪಂಚಾಯತ ಸದ್ಯಸ ವಿಷ್ಣು ದೇವಾಡಿಗ, ಮಾಹಾಬಲೇಶ್ವರ ನಾಯ್ಕ, ತಾಲೂಕು ಕಿಸಾನ್ ಸೆಲ್ ಅಧ್ಯಕ್ಷ ಕೆ.ಜಿ ನಾಯ್ಕ, ತಾಲೂಕು ಸೇವಾದಳ ಅಧ್ಯಕ್ಷ ಗಣಪತಿ ನಾಯ್ಕ, ತಾಲೂಕು ಪಂಚಾಯತ ಸದ್ಯಸ ಗೌರಿ ದೇವಾಡಿಗ, ಹಾಗೂ ಕಾಂಗ್ರೇಸ್ ಮುಖಂಡರಾದ ನಾರಾಯಣ ನಾಯ್ಕ, ಸುಬ್ರಾಯ ನಾಯ್ಕ, ಗಣೇಶ ಮೊಗೇರ, ಯೊಗೇಶ ಮೊಗೇರ, ರಾಜೇಶ ನಾಯ್ಕ, ಶಿವರಾಂ ನಾಯ್ಕ, ಕೃಷ್ಣ ನಾಯ್ಕ ಉಪಸ್ಥಿದ್ದರಿದ್ದರು.