ಉತ್ತರ ಕನ್ನಡ ಜಿಲ್ಲೆಯಲ್ಲಿ ಕರೋನಾ ಸೊಂಕಿತರ ಸಂಖ್ಯೆ ಹೆಚ್ಚಾಗಿದ್ದು, ಇಂದು ಭಟ್ಕಳದ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟಿದೆ. 36 ವರ್ಷದ ದುಬೈ ನಿಂದ ಭಟ್ಕಳಕ್ಕೆ ಬಂದು 14 ದಿನ ಹೋಮ್ ಕೊರಂಟೈನ್ ಮುಗಿಸಿದ್ದ ವ್ಯಕ್ತಿಗೆ ಕೊರೋನಾ ಪಾಸಿಟಿವ್ ಬಂದಿರುವುದು ದೃಡಪಟ್ಟಿದೆ.
ಈ‌ ಮೊದಲು ಕೊರೋನಾ ಪಾಸಿಟಿವ್ ದೃಡಪಟ್ಟಿದ್ದ ಗರ್ಭಿಣಿಯ ಗಂಡನೇ ಇಂದು ಪಾಸಿಟಿವ್ ಬಂದ ವ್ಯಕ್ತಿಯಾಗಿದ್ದಾನೆ.

RELATED ARTICLES  ಮಡಿವಾಳ ಸಮಾಜದ ಸಮುದಾಯ ಭವನಕ್ಕೆ ಆಳ್ವಾಗೆ ಮನವಿಮಾಡಿದ ಪ್ರಮುಖರು.

ದುಬೈ ನಿಂದ 17 ನೇ ತಾರೀಕಿನಂದು ಬಾಂಬೆಗೆ ಬಂದು ಮುಂಬೈ ನಿಂದ ಮತ್ಸ್ಯಗಂಧ ರೈಲಿನ ಮೂಲಕ ಮಾ.21ಕ್ಕೆ ಭಟ್ಕಳ ರೈಲ್ವೆ ನಿಲ್ದಾಣಕ್ಕೆ ಬಂದಿಳಿದು ಅಲ್ಲಿಂದ ಸಂಬಂಧಿ ಸ್ಕೂಟರ್ ನಲ್ಲಿ ಮನೆಗೆ ತೆರಳಿದ್ದ ಈತ ತನ್ನ ಇಬ್ಬರು ಚಿಕ್ಕ ಮಕ್ಕಳು, ಪತ್ನಿ ,ತಾಯಿ,ಸಂಬಂಧಿ ಜೊತೆ ಸಂಪರ್ಕ ಬೆಳಸಿದ್ದ.
14 ದಿನ ಕೊರಂಟೈನ್ ಮುಗಿಸಿದ್ದ ಈತ ನಗರದಲ್ಲಿ ಓಡಾಡುತಿದ್ದಾಗ ಜನರ ಈತನ ಕೈಮೇಲಿನ ಸೀಲ್ ನೋಡಿ ದೂರು ನೀಡಿದ್ದರು. ಇದರ ಆಧಾರದಲ್ಲಿ ಈತನನ್ನು ಬಂಧಿಸಿ ಕೊರಂಟೈನ್ ಮಾಡಲಾಗಿತ್ತು.

RELATED ARTICLES  ದುರವಸ್ಥೆಯಲ್ಲಿರುವ ಶಿರಸಿ-ಕುಮಟಾ ಹೆದ್ದಾರಿ : ಹೇಳ ತೀರದು ವಾಹನ ಸವಾರರ ಗೋಳು


ಈ ಸಂದರ್ಭದಲ್ಲಿ ಈತನ ಗರ್ಭಿಣಿ ಪತ್ನಿಗೆ ಸೊಂಕು ಪತ್ತೆಯಾಗಿತ್ತು.