ಮಕ್ಕಳ ಸಾಹಿತ್ಯ ಸಮಿತಿ ವತಿಯಿಂದ ಆಯೋಜಿಸಿದ್ದ ಅಂತರ್ಜಾಲದ ಅಂಗಳದಲ್ಲಿ ಶಿಕ್ಷಕ ಸಾಹಿತಿಗಳ ಮಕ್ಕಳ ಸಾಹಿತ್ಯ ಸಂಭ್ರಮ.
ಕಾರ್ಯಕ್ರಮವು ದಿನಾಂಕ 12- 4- 2020. ರಂದು ಬೆಳಗ್ಗೆ 9ರಿಂದ ಸಂಜೆ 7.30 ರವರೆಗೆ ಯಶಸ್ವಿಯಾಗಿ ನೆರವೇರಿತು.
ರಾಜ್ಯದ ಎಲ್ಲ ಜಿಲ್ಲೆಗಳ ಶಿಕ್ಷಕ ಸಾಹಿತಿಗಳ 2 ವಾಟ್ಸಪ್ ಗುಂಪುಗಳಲ್ಲಿ 256+176 ಶಿಕ್ಷಕರಿದ್ದು 130 ಜನ ಶಿಕ್ಷಕ ಸಾಹಿತಿಗಳು ಮಕ್ಕಳ ಸಾಹಿತ್ಯ ಸ್ಪರ್ಧೆಯಲ್ಲಿ ತಮ್ಮ ಕವಿತೆ ರಚನೆ ಮಾಡಿ ಮಕ್ಕಳ ಸಾಹಿತ್ಯ ಸಂವಾದ, ಮಕ್ಕಳ ಸಾಹಿತ್ಯದ ಆಡಿಯೋ-ವಿಡಿಯೋ ವಾಚನದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. 51 ಶಿಕ್ಷಕಿರು 79 ಶಿಕ್ಷಕರು ಅಂತರ್ಜಾಲವನ್ನು ಬಳಸಿಕೊಂಡು ಹೆಚ್ಚಾಗಿ ಪಾಲ್ಗೊಂಡಿದ್ದು ಗಮನ ಸೆಳೆಯಿತು.
ಶಿಕ್ಷಕ ಸಾಹಿತಿಗಳ ವಾಟ್ಸಾಪ್ ಬಳಗದ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿ ಸಾಹಿತಿಗಳಾಗಿ, ಅಂದು ತಾವು ವಾಟ್ಸಾಪ್ ಗ್ರೂಪ್ಗೆ ಬೆಳಗ್ಗೆಯಿಂದ ಸಂಜೆವರೆಗೆ ಜೊತೆಯಾಗಿದ್ದು ಸ್ಪರ್ಧೆಯ ತೀರ್ಪುಗಾರರಾಗಿ ಭಾಗವಹಿಸಿದ್ದ ಹಿರಿಯ ಸಾಹಿತಿ ಡಾ. ಕವಿತಾಕೃಷ್ಣ . ತುಮಕೂರ.ಗಣೇಶ್ ನಾಡೋರ.ಯಲ್ಲಾಪುರ ,ಲಕ್ಷ್ಮಣ್ ಚೌರಿ ಅವರು ಮಕ್ಕಳ ಸಾಹಿತ್ಯ ಸಂವಾದ ನಡೆಸಿದರು.
ಕಾರ್ಯಕ್ರಮದ ಉದ್ದೇಶ ಮತ್ತು ಆಯಾಮಗಳು
ಕೊರೋನಾದ ವಿಪತ್ತಿನ ಸಂದಿಗ್ಧ ಕಾಲದಲ್ಲಿ ರಜೆಯಲ್ಲಿರುವ ಶಿಕ್ಷಕ ಮಿತ್ರರು ರಜೆಯ ಸದುಪಯೋಗಕ್ಕಾಗಿ , ಶಾಲಾ ಮಕ್ಕಳಿಗೆ ಹೊಸ ಬಗೆಯಲ್ಲಿ ಸಾಹಿತ್ಯ ರಚನೆಗೆ ತೊಡಗಿಕೊಳ್ಳಲು , ಮಕ್ಕಳನ್ನು ಪಾಲಕರನ್ನು ಸಾಹಿತ್ಯಕವಾಗಿ ತಲುಪಲು ಹಾಗೂ ಬದಲಾದ ಅಂತರ್ಜಾಲ ತಾಂತ್ರಿಕ ಯುಗಕ್ಕೆ ತಮ್ಮನ್ನು ತೆರೆದುಕೊಳ್ಳಲು ಈ ಬಳಗವನ್ನು ಸದುಪಯೋಗ ಮಾಡಿಕೊಳ್ಳಲಾಗುತ್ತಿದೆ.
ಈ ವಾಟ್ಸಪ್ ಬಳಗ ಮೂರು ಆಯಾಮಗಳಲ್ಲಿ ಸಕ್ರಿಯವಾಗಿದೆ.
ಮಕ್ಕಳ ಸಾಹಿತ್ಯ ರಚನೆ, ಮಕ್ಕಳ ಸಾಹಿತ್ಯ ಸಂವಾದ, ಮಕ್ಕಳ ಸಾಹಿತ್ಯ ವಾಚನ .ನಿನ್ನೆ ನಡೆದ ಕಾರ್ಯಕ್ರಮದ ಪ್ರಮುಖ ಅಂಶಗಳಾಗಿತ್ತು.
ಅಲ್ಲದೆ ಈ ವಾಟ್ಸಪ್ ಬಳಗವು ಮಕ್ಕಳಿಗಾಗಿ ಹಲವು ಯೋಜನೆಗಳನ್ನು ಹಾಕಿಕೊಂಡಿದೆ. ಮಕ್ಕಳಿಗಾಗಿ ನೂತನ ಸಾಹಿತ್ಯರಚನೆ, ತರಗತಿ ಕೋಣೆಯಲ್ಲಿ ನಾವಿನ್ಯತೆ ಆವಿಷ್ಕಾರ, ಮಕ್ಕಳಿಗಾಗಿ ವಿಶೇಷ ಶಿಬಿರ, ಮಕ್ಕಳು ಹಾಗೂ ಪಾಲಕರಿಗಾಗಿ ಅಂತರ್ಜಾಲದಲ್ಲಿ ವಿಶೇಷ ಶೈಕ್ಷಣಿಕ ಜಾಗೃತಿ ಅಭಿಯಾನ, ಮಕ್ಕಳ ಸಾಹಿತ್ಯ ಅಭಿಯಾನ ಮತ್ತಿತರ ಯೋಜನೆಗಳನ್ನು ರೂಪಿಸಿಕೊಂಡಿದೆ.
ಶಿಕ್ಷಕರ ಪ್ರತಿಭಾ ಪರಿಷತ್ತಿನ ರಾಜ್ಯ ಅಧ್ಯಕ್ಷರಾದ ಶ್ರೀ ಪಿ ಮಹೇಶ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಉದ್ಘಾಟಿಸಿ ಮಕ್ಕಳ ಸಾಹಿತ್ಯ ಸಮಿತಿ ರಾಜ್ಯಮಟ್ಟದಲ್ಲಿ ಮಕ್ಕಳಿಗಾಗಿ ಜವಾಬ್ದಾರಿಯುತ ಕಾರ್ಯಕ್ರಮವನ್ನು ರೂಪಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಮಾತನಾಡಿದರು.
ಮಕ್ಕಳ ಸಾಹಿತ್ಯ ಸಮಿತಿಯ ರಾಜ್ಯ ನಿರ್ದೇಶಕರಾದ ಮಕ್ಕಳ ಸಾಹಿತಿ ರವಿರಾಜ ಸಾಗರ್ ಅವರು ಈ ಕಾರ್ಯಕ್ರಮದ ಪರಿಕಲ್ಪನೆ ರೂಪಿಸಿದ್ದು ಶಿಕ್ಷಕರು ಸದಾ ಹೊಸ ನಾವಿನ್ಯತೆಯತ್ತ ತೆರೆದುಕೊಳ್ಳಬೇಕು, ಇಂದಿನ ಜಾಗತಿಕ ಆವಿಷ್ಕಾರಗಳ ಬಗ್ಗೆ , ಅಂತರ್ಜಾಲದ ಸಾಧ್ಯತೆಗಳ ಬಗ್ಗೆ ತಿಳಿದುಕೊಂಡು ಶಿಕ್ಷಕರು ವೃತ್ತಿಪರವಾಗಿ ಅಭಿವೃದ್ಧಿಗೊಳ್ಳುತ್ತಾ ಶೈಕ್ಷಣಿಕ ಚಿಂತನೆಗಳನ್ನು ಬೆಳೆಸಿಕೊಳ್ಳಬೇಕು ಎಂದರು.
ಪ್ರಸ್ತಾವಿಕವಾಗಿ ಮಾತನಾಡಿದ ಅವರು ಶಿಕ್ಷಕ ಸಾಹಿತಿಗಳಿಂದ ರಾಜ್ಯಮಟ್ಟದಲ್ಲಿ ನಡೆದ ಮೊದಲ ಅಂತರ್ಜಾಲ ಮಕ್ಕಳ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ಇದಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹಿರಿಯ ಮಕ್ಕಳ ಸಾಹಿತ್ಯ ಡಾ. ಕವಿತಾಕೃಷ್ಣ ಅವರು ರಾಜ್ಯಮಟ್ಟದಲ್ಲಿ ಶಿಕ್ಷಕರು ಅಂತರ್ಜಾಲದ ತಾಂತ್ರಿಕ ವಿಷಯ ತಿಳಿದುಕೊಂಡು ಸದುಪಯೋಗಪಡಿಸಿಕೊಳ್ಳುವುದು ಹೆಮ್ಮೆಯ ವಿಷಯ ಎಂದರು,ಶಿಕ್ಷಕರು ಮನೆ ಮನೆಗೆ ಮಕ್ಕಳಸಾಹಿತ್ಯ ತಲುಪಿಸಬೇಕು ಎಂದರು.
ಮತ್ತೊಬ್ಬ ಮಕ್ಕಳ ಸಾಹಿತಿ ಗಣೇಶ್ ನಾಡೂರ ರವರು ಇದು ರಾಜ್ಯದ ಮಟ್ಟದಲ್ಲಿಯೇ ಮೊದಲ ಬಾರಿಗೆ ಇದು ಶಿಕ್ಷಕರ ನೂತನ ಪ್ರಯತ್ನ ಎಂದು ಶ್ಲಾಘಿಸಿದರು. ಶಿಕ್ಷಕರು ಮಕ್ಕಳಿಗೆ ಮತ್ತು ಪಾಲಕರಿಗೆ ಮಕ್ಕಳ ಸಾಹಿತ್ಯ ತಲುಪಿಸಬೇಕು ಅದು ಅವರ ಜವಾಬ್ದಾರಿ ಎಂದರು.
ಲಕ್ಷ್ಮಣ್ ಚೌರಿ ಅವರು ಮಕ್ಕಳ ಸಾಹಿತ್ಯ ಬೆಳವಣಿಗೆ ಶಿಕ್ಷಕರ ಮುಂದೆ ನಿಲ್ಲಬೇಕು. ಮಕ್ಕಳಲ್ಲಿ ಸೃಜನಶೀಲತೆ ಬೆಳೆಸಬೇಕು ಎಂದರು.ಮುಂದೆ ಮತ್ತಷ್ಟು ಹೊಸ ಯೋಜನೆಗಳು ಶಿಕ್ಷಕರಿಂದ ಬರಲಿ ಎಂದು ಆಶಿಸಿದರು
ಕಾರ್ಯಾಧ್ಯಕ್ಷರಾದ ವಿ ಜಿ ಅಗ್ರಹಾರ ಅವರು ನಿರ್ವಹಿಸಿದರು, ಉಪಾಧ್ಯಕ್ಷರಾದ ಶಿವಾರೆಡ್ಡಿ ಅವರು ಸ್ವಾಗತಿಸಿದರು, ಶಂಕರ್ ಕ್ಯಾಸ್ತಿ ಯವರು ಸಮಾರೋಪದ ನುಡಿಗಳನ್ನು ಆಡಿದರು, ಮಕ್ಕಳ ಸಾಹಿತ್ಯ ಸಮಿತಿಯ ರವಿರಾಜ್ ಸಾಗರ್ ,ಸುಜಾತ, ಮಂಗಳ, ಸಂತೋಷ್ ಬಿದರಗದ್ದೆ ಅಂತರ್ಜಾಲ ಕಾರ್ಯಕ್ರಮದ ತಾಂತ್ರಿಕ ನಿರ್ವಹಣೆ ಮಾಡಿದರು.
ವರದಿ : ಡಾ.ರವೀಂದ್ರ ಭಟ್ಟ ಸೂರಿ. ಕುಮಟಾ