ಕಾರವಾರ: ಕೊರೊನಾ ವೈರಸ್ ಹರಡದಂತೆ ತಡೆಗಟ್ಟುವ ಹಿನ್ನೆಲೆಯಲ್ಲಿ ಲಾಕ್‍ಡೌನ್ ಘೋಷಿಸಿರುವುದರಿಂದ ಕಾರ್ಮಿಕರಿಗೆ ಸಹಾಯಧನ ನೀಡಲು ಸರ್ಕಾರ ನಿರ್ದೇಶಿಸಿದ್ದು, ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ತಮ್ಮ ಬ್ಯಾಂಕ್ ಖಾತೆಗಳ ವಿವರವನ್ನು ತಕ್ಷಣ ಒದಗಿಸಬೇಕೆಂದು ಜಿಲ್ಲಾ ಕಾರ್ಮಿಕ ಇಲಾಖೆಯ ಅಧಿಕಾರಿ ಕುಮಾರ ಬಿ.ಆರ್ ಅವರು ಕೋರಿದ್ದಾರೆ.
ನೋಂದಾಯಿತ ಕಾರ್ಮಿಕರ ಖಾತೆಗಳಿಗೆ ಹಣ ಜಮಾ ಮಾಡಲು ಅವರವರ ಬ್ಯಾಂಕ್ ಖಾತೆ ಅವಶ್ಯವಿರುವ ಕಾರಣ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ತಮ್ಮ ಬ್ಯಾಂಕ್ ಖಾತೆ ನಂಬರ್, ಬ್ಯಾಂಕ್ ಮತ್ತು ಬ್ರಾಂಚ್ ಹೆಸರು, IಈSಅ ಅoಜe ವಿವರಗಳನ್ನು ಮತ್ತು ಆಧಾರ್ ಕಾರ್ಡ್ ಮತ್ತು ಕಾರ್ಮಿಕ ಇಲಾಖೆಯ ವತಿಯಿಂದ ಪಡೆದ ನೋಂದಣಿ ಪತ್ರ ಮತ್ತು ರೇಷನ್ ಕಾರ್ಡ್ (ಇದ್ದಲ್ಲಿ) ವಿವರವನ್ನು ಸಂಬಂಧಪಟ್ಟ ಕಾರ್ಮಿಕ ನಿರೀಕ್ಷಕರುಗಳ ಕಚೇರಿಗಳಿಗೆ ಕೂಡಲೇ ವಾಟ್ಸ್‍ಆ್ಯಫ್ ಮೂಲಕ ಸಲ್ಲಿಸಲು (ಯಾವುದೇ ಕಾರಣಕ್ಕೂ ಕಛೇರಿಗೆ ಖುದ್ದು ಭೇಟಿ ನೀಡದೆ) ವಿನಂತಿಸಲಾಗಿದೆ.
ಕಾರವಾರ ಕಾರ್ಮಿಕ ನಿರೀಕ್ಷಕರು 9902961745, ಅಂಕೋಲಾ 7349570383, ಹೊನ್ನಾವರ 7483794947, 9620269047, ಕುಮಟಾ 9902762624, ಭಟ್ಕಳ 9606564127, 9036670507, ಶಿರಸಿ 9483207715, ಸಿದ್ಧಾಪುರ 9742850006, ಹಳಿಯಾಳ 9632626157, ಯಲ್ಲಾಪುರ 9886205742, ಮುಂಡಗೋಡ 7406909645, , ದಾಂಡೇಲಿ (ಜೋಯಿಡಾ ಮತ್ತು ದಾಂಡೇಲಿಗೆ ಸಂಬಂಧಿಸಿದಂತೆ) 9632143637 ಈ ಮೊಬೈಲ್ ಸಂಖ್ಯೆಗಳಿಗೆ ವಾಟ್ಸ್‍ಆ್ಯಫ್ ಮೂಲಕ ಬ್ಯಾಂಕ್ ಪಾಸ್ ಬುಕ್ ಪ್ರತಿ ಹಾಗೂ ಫಲಾನುಭವಿಯ ನೋಂದಣಿ ಗುರುತಿನ ಚೀಟಿ, ಆಧಾರ್ ಕಾರ್ಡ್ ಹಾಗೂ ರೇಷನ್ ಕಾರ್ಡ್ ಇದ್ದಲಿ ಪೋಟೋ ತೆಗೆದು ಕಳುಹಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.