ಭಟ್ಕಳ: ತಾಲೂಕಿನ ಸಣ್ಣ ಮತ್ತು ಅತಿ ಸಣ್ಣ ರೈತರು ಮಲ್ಲಿಗೆ ಬೆಳೆಯನ್ನು ಹೆಚ್ಚಾಗಿ ನಂಬಿಕೊಂಡಂತೆ ಹೊನ್ನಾವರ ತಾಲೂಕಿನ ರೈತರು ಕಲ್ಲಂಗಡಿ ಹಣ್ಣಿನ ಬೆಳೆಯನ್ನು ಬೆಳೆದು ಜೀವನ ಸಾಗಿಸುತ್ತಿದ್ದಾರೆ.
ಲಾಕ್ ಡೌಕ್ ಡೌನ್ ನಿಂದಾಗಿ ಕಲ್ಲಂಗಡಿ ಹಣ್ಣನ್ನು ಹೊರರಾಜ್ಯಗಳಿಗೆ, ಹೊರ ಜಿಲ್ಲೆಗಳಿಗೆ ಸಾಗಿಸಲಾಗದೆ ರೈತರು ಸಂಕಷ್ಟಕ್ಕೆ ಈಡಾಗಿದ್ದಾರೆ.
ಇಂದು ಮೂಳ್ಕೋಡಿನ ಕಲ್ಲಂಗಡಿ ಬೆಳೆ ಬೆಳೆಯುವ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಶಾಸಕ ಸುನೀಲ್ ನಾಯ್ಕ ಕಲ್ಲಂಗಡಿ ಹಣ್ಣನ್ನು ಸ್ಥಳೀಯವಾಗಿ ಮಾರಟ ಮಾಡಲು ಅಗತ್ಯ ಕ್ರಮವನ್ನು ಕೈಗೊಂಡು ವಾಹನಗಳಿಗೆ ಪಾಸ್ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟರು.