ಕುಮಟಾ ಉಪವಿಭಾಗದ ನಗರ ಶಾಖೆ ವ್ಯಾಪ್ತಿಯಲ್ಲಿನ ಬಸ್ತಿಪೇಟೆಯಿಂದ ನೆಲ್ಲಿಕೇರಿ ಹಳೆ ಬಸ್ ಸ್ಟಾಂಡ್ ವರೆಗೆ ರಸ್ತೆ ಅಗಲೀಕರಣದ ಕೆಲಸ ನಡೆಯುತ್ತಿರುವುದರಿಂದ, ಸುತ್ತಮುತ್ತಲಿನ ಕೆಲವು ವಿದ್ಯುತ್ ಕಂಬವನ್ನು ಸ್ಥಳಾಂತರಿಸಬೇಕಾಗಿರುವುದರಿಂದ ದಿನಾಂಕ : 17/04/2020 ರಿಂದ 18/04/2020 ರವರೆಗೆ ಮುಂಜಾನೆ 9:30 ರಿಂದ ಸಾಯಂಕಾಲ 5:30 ರವರೆಗೆ ಬಸ್ತಿಪೇಟೆಯ್ ರಮಾನಾಥ್ ಕಾಂಪ್ಲೆಕ್ಸ್ ತನಕ , ನೆಲ್ಲಿಕೇರಿ ಹಳೆ ಬಸ್ ಸ್ಟಾಂಡ್, ಹಳೆ ಮೀನು ಮಾರ್ಕೆಟ್, ಉಪ್ಪಿನ ಗಣಪತಿ ದೇವಸ್ಥಾನ ಹತ್ತಿರ, ಪೋಸ್ಟ್ ಆಫೀಸ್ ಸುತ್ತಮುತ್ತಲಿನ ಏರಿಯಾದಲ್ಲಿ ವಿದ್ಯುತ್ ಸಂಪರ್ಕವನ್ನು ನಿಲುಗಡೆಗೊಳಿಸಲಾಗುವುದು. ದಯವಿಟ್ಟು ಗ್ರಾಹಕರು ಸಹಕರಿಸಬೇಕೆಂದು ಕೋರಲಾಗಿದೆ ಎಂದು ಹೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.