ಭಟ್ಕಳ: ರಾಜ್ಯದಲ್ಲಿ ಯಾವುದೇ ರೀತಿಯ ಸಂಕಷ್ಟ ಎದುರಾದಾಗ ಸದಾ ಸ್ಪಂದಿಸುವ ರಾಜ್ಯದ ಪ್ರತಿಷ್ಟಿತ ಅರ್ಬನ ಬ್ಯಾಂಕುಗಳಲ್ಲಿ ಒಂದಾದ ಭಟ್ಕಳ ಅರ್ಬನ್ ಕೋ-ಆಪರೇಟಿವ್ ಬ್ಯಾಂಕು ಈ ಬಾರಿಯೂ ಕೊರೊನಾ ವೈರಸ್ ಸೋಂಕಿನಿಂದ ಎದುರಾದ ಸಂಕಷ್ಟಕ್ಕೆ ಸ್ಪಂದಿಸಿದ್ದು, ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ರೂ.2 ಲಕ್ಷ ದೇಣಿಗೆಯನ್ನು ಸಹಕಾರ ಸಂಘಗಳ ಸಹಾಯಕ ನಿಬಂಧಕರ ಮೂಲಕ ಸಾಮಾಜಿಕ ಜವಾಬ್ದಾರಿಯನ್ನು ಮೆರೆದಿದೆ.
ಅಲ್ಲದೇ ತಾಲೂಕಿನ ಅರ್ಹ ಫಲಾನುಭವಿಗಳಿಗೆ ಬ್ಯಾಂಕಿನ ನಿರ್ದೇಶಕರುಗಳ ಮೂಲಕ ಜೀವನಾವಶ್ಯಕ ವಸ್ತುಗಳಾದ ಬೆಣ್ತಕ್ಕಿ, ಕೊಚಗಕ್ಕಿ, ಸಕ್ಕರೆ, ರವಾ, ತೊಗರಿಬೇಳೆ, ಮೈದಾ, ಸೋಪ್, ಬೆಂಕಿಪೆಟ್ಟಿಗೆ, ಟೀ ಪೌಡರ್, ಪಾಮ್‍ಎಣ್ಣೆ, ಗೋದಿ ಹಿಟ್ಟು, ಇವುಗಳನ್ನೊಳಗೊಂಡ 355 ಪುಡ್‍ಕಿಟ್‍ಗಳನ್ನು ವಿತರಿಸಿದೆ.