ಕುಮಟಾ : ತಾಲೂಕಿನ ಮೂಲತಃ ಹೆಗಡೆಯ ನಿವಾಸಿ ಕೆ.ಎಸ್.ಆರ್.ಟಿ.ಸಿ ಕುಮಟಾ ಘಟಕದ ಸಂಚಾರಿ ನಿಯಂತ್ರಕರಾದ ಶ್ರೀಯುತ ಜಿ.ವಿ.ನಾಯ್ಕ, ಇವರು ಪ್ರತಿ ವರ್ಷವೂ ತಮ್ಮ ತಂದೆಯವರ ಪುಣ್ಯ ತಿಥಿಯಂದು ತಮ್ಮ ಸಂಬಂಧಿಕರು, ಬಂಧುಬಾಂದವರನ್ನು ಕರೆದು ಅನ್ನದಾನ ಮಾಡಿ ಅಗಲಿದವರ ಆತ್ಮಕ್ಕೆ ಗೌರವ ಸಲ್ಲಿಸುತ್ತಿದ್ದರು.

RELATED ARTICLES  ಅಭಿನವ ಜಾತವೇದಮುನಿ ಶಿವಾಚಾರ್ಯ ಸ್ವಾಮೀಜಿಯವರಿಗೆ ಗೌರವ

ಆದರೆ ಕೊರೋನಾ ರೋಗದ ಹಿನ್ನೆಲೆಯಲ್ಲಿ ಈ ಬಾರಿ ತಮ್ಮ ತಂದೆಯವರ ಪುಣ್ಯ ತಿಥಿಯ 21 ವರ್ಷದ ನಿಮಿತ್ತ ಒಂದು ತಿಂಗಳ ವೇತನ 40,000 ರೂಪಾಯಿಯನ್ನು
ಕೊವೀಡ್-19 ಪರಿಹಾರ ನಿಧಿಗೆ ದೇಣಿಗೆಯಾಗಿ ಕುಮಟಾ ಉಪವಿಭಾಗಾಧಿಕಾರಿ ಎಮ್. ಅಜೀತ್ ಅವರ ಮುಖಾಂತರ ನೀಡಿದ್ದಾರೆ. ಇವರ ಈ ಕಾರ್ಯವನ್ನು ಸಂಚಾರಿ ನಿರ್ವಾಹಕರಾದ ಶ್ರೀಯುತ ಸೀತಾರಾಮ ನಾಯ್ಕ ಅವರು ಅಭಿನಂದಿಸಿದ್ದಾರೆ.

RELATED ARTICLES  ಜಿಲ್ಲಾ ಗ್ರಾಮ ಒಕ್ಕಲು ಯುವ ಬಳಗದಿಂದ ಅಪಘಾತ ಪರಿಹಾರ ನಿಧಿಯ ವಿತರಣೆ