ಶಿರಸಿ: ಉತ್ತರ ಕನ್ನಡದಿಂದ ಉಡುಪಿ, ಮಂಗಳೂರಿಗೆ ರೋಗಿಗಳನ್ನು ಕೊಂಡೊಯ್ಯುವ ಆಂಬುಲೆನ್ಸ್‌ಗಳನ್ನು ಉಡುಪಿ ಜಿಲ್ಲೆಯ ಶಿರೂರು ಗಡಿಯಲ್ಲಿ ತಡೆದು ವಾಪಸ್ ಕಳುಹಿಸುತ್ತಾರೆ ಎಂದು ಆರೋಪಿಸಿ, ಶಿರಸಿಯ ಖಾಸಗಿ ಆಂಬುಲೆನ್ಸ್‌ಗಳ ಮಾಲೀಕರು ಸಂಚಾರ ಸ್ಥಗಿತಗೊಳಿಸಿ, ಪ್ರತಿಭಟಿಸಿದರು.
ಜಿಲ್ಲೆಯಿಂದ ರೋಗಿಗಳನ್ನು ಮಣಿಪಾಲ, ಮಂಗಳೂರು, ದೇರಳಕಟ್ಟೆ ಮತ್ತಿತರ ಕಡೆಗೆ ಚಿಕಿತ್ಸೆಗಾಗಿ ಕೊಂಡೊಯ್ಯುವಾಗ ಶಿರೂರ ಚೆಕ್‌ಪೋಸ್ಟ್‌ನಲ್ಲಿ ಅಂಬುಲೆನ್ಸ್‌ಗಳನ್ನು ತಡೆದು ವಾಪಸ್ ಕಳುಹಿಸುತ್ತಿದ್ದಾರೆ. ಗಂಭೀರ ಸಮಸ್ಯೆಗಳಿಂದ ಬಳಲುತ್ತಿರುವ ರೋಗಿಗಳಿಗೂ ವಿನಾಯಿತಿ ನೀಡದೇ, ವಾಪಸ್ ಕಳುಹಿಸುತ್ತಿದ್ದು, ಸಮಸ್ಯೆ ಬಗೆಹರಿಯುವವರೆಗೂ ರೋಗಿಗಳನ್ನು ಆಸ್ಪತ್ರೆಗೆ ಕೊಂಡೊಯ್ಯುವುದಿಲ್ಲ ಎಂದು ಸ್ಥಳೀಯ ಆಂಬುಲೆನ್ಸ್ ಚಾಲಕರು ತಮ್ಮ ವಾಹನಗಳನ್ನು ಇಲ್ಲಿನ ದೇವಿಕೆರೆ ಸರ್ಕಲ್ ಬಳಿ ನಿಲ್ಲಿಸಿ ಪ್ರತಿಭಟಿಸಿದರು.