ಕಾರವಾರ: ಜಿಲ್ಲೆಯ ವಿವಿಧೆಡೆ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಮತ್ತು ಸಾಗಿಸಲಾಗುತ್ತಿದ್ದ ಮದ್ಯವನ್ನು ಅಬಕಾರಿ ಇಲಾಖೆ ಪೊಲೀಸರು ಜಪ್ತಿ ಮಾಡಿದ್ದಾರೆ.
ಮೀನು ತೆಗೆದುಕೊಂಡು ಹೋಗುವ ಕಂಟೇನರ್‌ನಲ್ಲಿ ಕೊಂಡೊಯ್ಯಲಾಗುತ್ತಿದ್ದ 45 ಲೀಟರ್ ಗೋವಾ ಮದ್ಯ ಮತ್ತು 36 ಲೀಟರ್ ಬಿಯರ್ ಅನ್ನು ಕಾರವಾರ ತಾಲ್ಲೂಕಿನ ಮಾಜಾಳಿ ಚೆಕ್‌ಪೋಸ್ಟ್‌ನಲ್ಲಿ ಗುರುವಾರ ರಾತ್ರಿ ವಶ ಪಡಿಸಿಕೊಳ್ಳಲಾಗಿದೆ. ಆಂಧ್ರಪ್ರದೇಶದ ನೋಂದಣಿ ಸಂಖ‌್ಯೆ ಹೊಂದಿದ್ದ ಲಾರಿಯಲ್ಲಿ ಅಂದಾಜು ₹ 50 ಸಾವಿರ ಮೌಲ್ಯದ ಮದ್ಯವಿತ್ತು. ಈ ಸಂಬಂಧ ಚಾಲಕ ಪರಶುರಾಮನ್‌ನನ್ನು ಬಂಧಿಸಿ, ಲಾರಿಯನ್ನು ಮುಟ್ಟಗೋಲು ಹಾಕಿಕೊಳ್ಳಲಾಗಿದೆ.
ಹೊನ್ನಾವರ ತಾಲ್ಲೂಕಿನ ಮಾಗೋಡು ಗ್ರಾಮದಲ್ಲಿ ಮನೆ
ಯೊಂದರ ಸಮೀಪದ ತೋಟದಲ್ಲಿ ಬಚ್ಚಿಡಲಾಗಿದ್ದ 300 ಲೀಟರ್ ಬೆಲ್ಲದ ಕೊಳೆಯನ್ನು ಜಪ್ತಿ ಮಾಡಲಾಗಿದೆ. ಈ ಸಂಬಂಧ ಗೋವಿಂದ ನಾರಾಯಣ ಗೌಡ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿದೆ.