ಕುಮಟಾ: ಪಟ್ಟಣದ ಹೊಳೆಗದ್ದೆ ಬಳಿ ಇರುವ ಅಲ್ಫಾ ವೈನ್ ಶಾಪ್ ಶಟರ್ಸನ್ನ ಒಡೆದು ಮದ್ಯವನ್ನು ಕಳ್ಳತನ ಮಾಡಲಾಗಿದ್ದು. ಕಳ್ಳರು ಮದ್ಯ ಕದಿಯುವಲ್ಲಿ ಕೈಚಳಕ ತೋರಲು ಮುಂದಾಗಿದ್ದಾರೆ.
ಲಾಕ್ ಡೌನ್ ನಿಂದ ಮದ್ಯ ಮಾರಾಟ ಸಹ ಬಂದ್ ಮಾಡಿರುವುದು ಮದ್ಯ ವ್ಯಸನಿಗಳಿಗಂತೂ ನುಂಗಲಾರದ ತುತ್ತಾಗಿದೆ. ಮದ್ಯಕ್ಕಾಗಿ ವೈನ್ ಶಾಪ್ ಗೆ ಕನ್ನ ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಜನರು ಹಾಸ್ಯ ಮಾಡುತ್ತಿದ್ದಾರೆ.
ಒಟ್ಟು 43.665 ರೂಪಾಯಿ ಮೌಲ್ಯದ ವಿವಿಧ ಬ್ರಾಂಡ್ ಮದ್ಯಗಳನ್ನ ಕಳ್ಳರು ಹೊತ್ತೋಯ್ದಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.