ಗೋಕರ್ಣ: ಗೋಕರ್ಣದಲ್ಲಿ ಜೆಸಿಬಿ ಚಾಲಕರಾಗಿ ಕೆಲಸ ಮಾಡುತ್ತಿದ್ದ ಮೂವರು, ಹುಬ್ಬಳ್ಳಿಗೆ ಯಾವುದೋ ಕಾರ್ಯದ ನಿಮಿತ್ತ ತೆರಳಿದ್ದರು. ಆದರೆ ಲಾಕ್ ಡೌನ್ ನಿಂದಾಗಿ ವಾಪಸ್ ಬರಲಾಗದೆ ಇದ್ದಾಗ, ಹುಬ್ಬಳ್ಳಿಯಲ್ಲಿ ಪೊಲೀಸ್ ಅಧಿಕಾರಿಗೆ ಹಣ ನೀಡಿರುವ ಮೂವರು, ಪೊಲೀಸ್ ಪೇದೆಯನ್ನೇ ಚಾಲಕನನ್ನಾಗಿಸಿಕೊಂಡು ಜಿಲ್ಲೆಯನ್ನು ಪ್ರವೇಶಿಸಿದ್ದಾರೆ.
ದುರದೃಷ್ಟವಶಾತ್, ಕೊರೋನಾ ತಡೆಗಾಗಿ ಗೋಕರ್ಣದಲ್ಲಿ ರಚಿಸಲಾಗಿರುವ ಪಂಚಾಯತಿ ಅಧ್ಯಕ್ಷ, ಮಾಜಿ ಅಧ್ಯಕ್ಷ, ನೋಡಲ್ ಅಧಿಕಾರಿ, ಪೊಲೀಸರ ‘ಟಾಸ್ಕ್ ಫೋರ್ಸ್’ ಸಂಶಯದಿಂದ ನಾಲ್ವರನ್ನು ಹಿತ್ತಲಮಕ್ಕಿ ಚೆಕ್ ಪೋಸ್ಟ್ ನಲ್ಲಿ ತಡೆದು ಪ್ರಶ್ನಿಸಿದಾಗ ಇದು ಗೊತ್ತಾಗಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.