ದಿನಾಂಕ 20.04.2020 ರಿಂದ ಸೀಮಿತವಾಗಿ ಅಡಿಕೆ ಖರೀದಿಸಲು ನಿರ್ಧರಿಸಲಾಗಿದ್ದು, ಈ ಕೆಳಗಿನಂತೆ ನಿಯಮ ರೂಪಿಸಲಾಗಿದೆ.
- ಒಬ್ಬ ಸದಸ್ಯರಿಗೆ ಒಂದು ತಿಂಗಳಲ್ಲಿ ಗರಿಷ್ಠ 1 ಕ್ವಿಂಟಾಲ್ ಅಥವಾ ರೂ 25,000/- ದ ಅಡಿಕೆ ಮಾರಾಟಕ್ಕೆ ಅವಕಾಶ.
- ಪ್ರತಿದಿನ 30 ಸದಸ್ಯರಿಗೆ ಮಾತ್ರ ಅವಕಾಶ.
- ಶಾಖಾಧಿಕಾರಿಗಳ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಟೋಕನ್ ಪಡೆದುಕೊಳ್ಳತಕ್ಕದ್ದು. ದಿನದ ಗರಿಷ್ಠ ಮಿತಿಯ (30 ಸದಸ್ಯರು) ಬಳಿಕ ಮುಂದಿನ ದಿನಕ್ಕೆ ಟೋಕನ್ ಪಡೆಯಬೇಕು.
- ಖರೀದಿ ಸಮಯ : ಬೆಳಿಗ್ಗೆ ಗಂಟೆ 9.00 ರಿಂದ ಮಧ್ಯಾಹ್ನ 2.00 ರ ವರೆಗೆ.
ಅಡಿಕೆ ಖರೀದಿಸುವ ಶಾಖೆಯ ವಿವರ
ಕುಮಟಾ
ಅಡಿಕೆ : ಸೋಮವಾರ, ಬುಧವಾರ, ಶುಕ್ರವಾರ.
ಸಂಪರ್ಕ : AMARESH P – 9611826072
ಕಛೇರಿ : 08386295554 / 08386222154
ಸದಸ್ಯರು ಶಾಖೆಗಳಿಗೆ ಬರುವಾಗ ಕ್ಯಾಂಪ್ಕೊ ಸದಸ್ಯತ್ವದ ಗುರುತು ಚೀಟಿ, ಕ್ಯಾಂಪ್ಕೊ ಕಾರ್ಡು, ಪಹಣಿ ಪತ್ರವನ್ನು ತಮ್ಮೊಂದಿಗೆ ಇಟ್ಟುಕೊಳ್ಳುವುದರ ಜತೆಗೆ ಕಡ್ಡಾಯವಾಗಿ ಮುಖಗವುಸು ( ಮಾಸ್ಕ್ ) ಹಾಕಿಕೊಂಡು ಕನಿಷ್ಠ 3 ಅಡಿಗಳ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳತಕ್ಕದ್ದು.
ಇದುವರೆಗೆ ಸದಸ್ಯರಾಗಿರುವವರಿಗೆ ಮಾತ್ರ ಅವಕಾಶ.