Covid-19 ತಡೆಗಟ್ಟುವ ನಿಟ್ಟಿನಲ್ಲಿ ಇರುವ ಲಾಕ್ ಡೌನ್ ಹಿನ್ನೆಲೆಯಲ್ಲಿ TSS ನಿಂದ ಈಗಾಗಲೇ ಹಳ್ಳಿಗಳಿಗೆ ಜೀವನ ಅವಶ್ಯಕ ವಸ್ತುಗಳನ್ನು ಪೂರೈಸಲಾಗುತ್ತಿದೆ. ಹಾಗೆಯೇ ನಗರದ ಕೆಲ ಪ್ರದೇಶಗಳಿಗೆ ಆನ್ಲೈನ್ ಪೋರ್ಟಲ್ http://tsssupermarket.com ಮೂಲಕ ಮನೆಯ ಬಾಗಿಲಿಗೆ ವಸ್ತುಗಳನ್ನು ತಲುಪಿಸಲಾಗುತ್ತಿದೆ.
ಏನಿದು ಹೊಸ ವಾಟ್ಸಪ್ ಸೇವೆ?
ಇಷ್ಟು ವ್ಯವಸ್ಥೆಯ ಹೊರತಾಗಿಯೂ ಕೆಲವು ಗ್ರಾಹಕರುಗಳಿಗೆ ಜೀವನಾವಶ್ಯಕ ವಸ್ತುಗಳು ದೊರಕುತ್ತಿಲ್ಲವಾಗಿದ್ದು ಅಂತಹವರು ಸೂಪರ್ಮಾರ್ಕೆಟ್ ಎದುರು ಬಂದು ಗುಂಪಾಗಿ ನಿಂತು ಖರೀದಿಗೆ ಪ್ರಯತ್ನಿಸುತ್ತಿರುತ್ತಾರೆ.
ಈ ಸಮಸ್ಯೆಯನ್ನು ನಿಯಂತ್ರಿಸುವ ಸಲುವಾಗಿ ಹಾಗೂ ಗ್ರಾಹಕರ ಅಮೂಲ್ಯ ಸಮಯವನ್ನು ಉಳಿಸುವ ಸಲುವಾಗಿ, ವಾಟ್ಸಪ್ ಮೂಲಕ ಆರ್ಡರ್ ಮಾಡಿ ನಿಗದಿತ ಸಮಯಕ್ಕೆ ವಸ್ತುಗಳನ್ನು ಕೊಂಡೊಯ್ಯಲು ವ್ಯವಸ್ಥೆಯನ್ನು ರೂಪಿಸಲಾಗಿದೆ. ಈಗಾಗಲೇ ಯಶಸ್ವಿಯಾಗಿ ಚಾಲ್ತಿಯಲ್ಲಿರುವ ಈ ವ್ಯವಸ್ಥೆಯಡಿಯಲ್ಲಿ, ಪ್ರತಿದಿನ ಬೆಳಿಗ್ಗೆ 7 ರಿಂದ 10 ಗಂಟೆಯ ಒಳಗಾಗಿ ಗ್ರಾಹಕರು ವಾಟ್ಸಪ್ ಮೂಲಕ ತಮ್ಮ ಅವಶ್ಯಕ ವಸ್ತುಗಳನ್ನು ನಾವು ನೀಡಿರುವ ನಿಗದಿತ ಯಾದಿಯ ಪ್ರಕಾರ ಬರೆದು ಸ್ಪಷ್ಟವಾಗಿ ಫೋಟೋ ತೆಗೆದು ನಮಗೆ ವಾಟ್ಸಪ್ ಮಾಡಬೇಕು.
ಸರಿಯಾಗಿ ಕಳುಹಿಸಿದ ಮೊದಲ 150 ಗ್ರಾಹಕರಿಗೆ ವಸ್ತುಗಳನ್ನು ಸಿದ್ಧಪಡಿಸಿ, ತೆಗೆದುಕೊಂಡು ಹೋಗಲು ಫೋನ್ ಮೂಲಕ ತಿಳಿಸಲಾಗುವುದು.
ನಂತರ ಗ್ರಾಹಕರು ನಿಗದಿತ ಸಮಯಕ್ಕೆ ಬಂದು ವಸ್ತುಗಳನ್ನು ಅತಿ ಕಡಿಮೆ ಅವಧಿಯಲ್ಲಿ ಕೊಂಡಯ್ಯಬಹುದಾಗಿದೆ..
ಇದೊಂದು ಅತ್ಯಂತ ಸರಳ ಹಾಗೂ ಸುಲಭದ ವ್ಯವಸ್ಥೆಯಾಗಿದ್ದು ಇದರ ಪ್ರಯೋಜನವನ್ನು ಗ್ರಾಹಕರು ಪಡೆದುಕೊಳ್ಳಬಹುದಾಗಿದೆ.
ವಾಟ್ಸಾಪ್ ಸಂಖ್ಯೆ
8088312312