ಹೊನ್ನಾವರ: ತಾಲೂಕಿನ ಹಳದೀಪುರ ಮತ್ತು ಕರ್ಕಿ ವ್ಯಾಪ್ತಿಯಲ್ಲಿ ಕೊರೋನಾ ಮಹಾಮಾರಿಯ ವಿರುದ್ಧ ಜನತೆಯ ರಕ್ಷಣೆಯಲ್ಲಿ ತೊಡಗಿರುವ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿಗಳು,ಪಂಚಾಯತ್ ಸಿಬ್ಬಂದಿಗಳಿಗೆ (70ಕ್ಕೂ ಹೆಚ್ಚಿನ ಜನರಿಗೆ) ಕ್ಷೇತ್ರದ ಮಾಜಿ ಶಾಸಕಿಯರಾದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ದಿ.ಮೋಹನ್ ಕೆ.ಶೆಟ್ಟಿ ಮೆಮೋರಿಯಲ್ ಟ್ರಸ್ಟ್ ವತಿಯಿಂದ ದಿನಸಿ ಸಾಮಗ್ರಿಗಳ ಕಿಟ್ ವಿತರಿಸಿದರು..
ಈ ಸಂದರ್ಭದಲ್ಲಿ ಹಳದೀಪುರ ಪಂಚಾಯತ್ ಅಧ್ಯಕ್ಷರಾದ ಗುಣಮಾಲಾ ಇಂದ್ರ, ಆರೋಗ್ಯಾಧಿಕಾರಿಗಳು, ಮುಂಖಡರಾದ ರವಿಕುಮಾರ್ ಎಂ.ಶೆಟ್ಟಿ, ವಿನಾಯಕ ಶೇಟ್, ದಾಮೋದರ್ ನಾಯ್ಕ, ರವಿ ಮೊಗೇರ, ಮಂಜುನಾಥ್ ಶಾನಭಾಗ, ಜನಾರ್ಧನ ನಾಯ್ಕ, ನಾಗವೇಣಿ ಗೌಡ,ಮಂಜುಳಾ ನಾಯ್ಕ, ಇಸ್ಮಾಯಿಲ್, ಮನೋಜ ನಾಯಕ, ಸಂಶೀರ್ ಸಾಬ್ ಮುಂತಾದವರು ಹಾಜರಿದ್ದರು..