ರಾಜಕಾರಣಿಗಳ ಕುರಿತು ಅಧಿಕಾರದಲ್ಲಿ ಇದ್ದಾಗ ಮಾತ್ರ ಜನರ ಕುರಿತಾದ ಕಾಳಜಿ ವಹಿಸುತ್ತಾರೆ ಎನ್ನುವ ಮಾತಿದೆ. ಇದಕ್ಕೆ ಅಪವಾದವಾಗಿರುವವರು ಭಟಕಳ ಕ್ಷೇತ್ರದ ಮಾಜಿ ಜನಪ್ರಿಯ ಶಾಸಕರಾದ ಸನ್ಮಾನ್ಯ ಮಂಕಾಳ ವೈದ್ಯರು. ಸಮಾಜದ ಕೆಳಸ್ಥರದಿಂದ ಬಂದ ಇವರಿಗೆ ಜನಸಾಮಾನ್ಯರು ಪಡುವ ಕಷ್ಟನಷ್ಟಗಳ ಅರಿವಿದೆ. ಎಷ್ಟು ಎತ್ತರಕ್ಕೆ ಏರಿದರೂ ಅವರು ಆ ಬವಣೆಯನ್ನು ಮರೆಯುವದಿಲ್ಲ. ಅಧಿಕಾರ ಎನ್ನುವದು ಸೀಮಿತ. ಸಮಾಜಸೇವೆಗೆ ತೊಡಗುವದು ಎಂದರೆ ಮಾನವೀಯತೆಗಿರುವ ವಿಪುಲ ಅವಕಾಶ ಎಂದು ಅವರು ಈ ಕುರಿತು ಯಾವತ್ತೂ ಹಿಂದೆ ಬಿದ್ದಿಲ್ಲ. ಅವರ ಮನೆಯಾಗಲಿ ಅಥವಾ ಅವರಿರುವ ಸ್ಥಳ ಅದು ಹೈವೇಯೇ ಆಗಿರಬಹುದು, ಇಲ್ಲಾ ಮನೆ, ಆಫೀಸೇ ಆಗಿರಬಹುದು, ಕಷ್ಟಗಳನ್ನು ಕೇಳಿಬಂದವರಿಗೆ ಇಲ್ಲಾ ಎನ್ನುವ ಜಾಯಮಾನದವರಲ್ಲ. ಈ ಗುಣ ಅನೇಕರಲ್ಲಿ ಇರಬಹುದು, ಆದರೆ ಇವರ ವಿಶಿಷ್ಠಗುಣ ಎಂದರೆ ಜನಸಾಮಾನ್ಯರ ಬವಣೆ ಏನಿರಬಹುದು ಎನ್ನುವದನ್ನು ಹುಡುಕಿ ಆ ಕುರಿತು ತನ್ನ ಕೈಲಾದ ನೆರವನ್ನು ನೀಡುವದು. ಇದಕ್ಕೆ ಉದಾಹರಣೆ ಎಂದರೆ ಇವರು ತಮ್ಮ ಮತದಾರ ಕ್ಷೇತ್ರದಲ್ಲಿ ಬರುವ ಟೆಂಪೂ ಉದ್ಯೋಗಿಗಳ ಕುರಿತು ಮನಮಿಡಿದದ್ದು. ಹೊನ್ನಾವರ, ಭಟ್ಕಳ ಮತ್ತು ಗೇರುಸೊಪ್ಪಾ ಮಾರ್ಗದಲ್ಲಿ ಸುಮಾರು ನಾನ್ನೂರಕ್ಕೂ ಮಿಕ್ಕಿ ಟೆಂಪೋ ಪ್ರತಿನಿತ್ಯ ಜನಸಾಮಾನ್ಯರ ಸಾರಿಗೆಗೆ ಅನುಕೂಲ ಮಾಡುತ್ತಿದೆ. ಇದನು ಅವಲಂಭಿಸಿರುವವರ ಚಾಲಕರು, ಸಹಾಯಕರು, ಮಾಲಿಕರೂ ಎಲ್ಲರೂ ತಮ್ಮ ಬದುಕಿನ ರಥಕ್ಕಾಗಿ ಸಂಪೂರ್ಣ ಈ ಸಾರಿಗೆಯನ್ನೇ ಅವಲಂಭಿಸಿರುತ್ತಾರೆ.
ಇದೀಗ ಕರೋನಾ ಮಹಾಮಾರಿಯ ಹೊಡೆತದಿಂದಾಗಿ ಈ ಎಲ್ಲಾ ಜನರೂ ಉದ್ಯೋಗವಿಲ್ಲದೇ ಕೈಯಲ್ಲಿ ಕಾಸು ಇಲ್ಲದೇ ಕಂಗಾಲಾಗಿದ್ದಾರೆ. ಈ ಸಂಧರ್ಭದಲ್ಲಿ ಇವರ ನೆರವಿಗೆ ಯಾರೂ ಬಂದಿಲ್ಲ. ಏಕೆಂದರೆ ಇವರೆಲ್ಲ ಸಮಾಜದ ಗಣ್ಯವ್ಯಕ್ತಿಗಳಲ್ಲವಲ್ಲ. ಒಂದೆಡೆ ಬ್ಯಾಂಕಿನವರ ಕಾಟ, ಇನ್ನೊಂದೆಡೆ ಉದ್ಯೋಗವಿಲ್ಲದೇ ಹೊಟ್ಟೆ ಹೊರೆದುಕೊಳ್ಳುವದು ಹೇಗೆಂಬ ಚಿಂತೆ. ಈ ಹೊತ್ತಿನಲ್ಲಿ ಅವರಿಗೆ ಕರೆಯದೇ ಆಪದ್ಭಾಂದವನಂತೆ ಬಂದವರು ಮಂಕಾಳ ವೈದ್ಯ ಸರ್ ಅವರು. ಭಟಕಳ ಮತದಾರ ಕ್ಷೇತ್ರದ ಅಷ್ಟೂ ಟೆಂಪೋ ಉದ್ಯೋಗಿಗಳಿಗೆ ಒಂದು ಸಾವಿರ ರೂಪಾಯಿಯ ಮೊತ್ತದ ದಿನಸಿ ಸಮಾನುಗಳನ್ನು ವಿತರಿಸುವ ಗುರಿ ಹೊಂದಿದ್ದಾರೆ. ಅವರೆಲ್ಲರನ್ನೂ ಭೇಟಿಯಾಗಿ ಧೈರ್ಯ ತುಂಬಿ ಈ ವಿಷಮ ಗಳಿಗೆಯಲ್ಲಿ ಎದೆಗುಂದುವದು ಬೇಡ ತಾನಿದ್ದೇನೆ ಎನ್ನುವ ಭರವಸೆಯನ್ನು ಮೂಡಿಸಿದ್ದಾರೆ. ಹಸಿದ ಹೊಟ್ಟೆಯ ಗಟ್ಟಿಯಾಗುವತ್ತ ಗಮನಹರಿಸಿದ್ದಲ್ಲದೇ ಅವರಿಗೆ ಇನ್ನಿತರ ಸೌಲಭ್ಯ ದೊರಕಿಸಿಕೊಡಲೂ ಮುಂದಾಗಿದ್ದಾರೆ.
ಜನನಾಯಕನೆನ್ನುವದು ವೋಟಿನ ಆಧಾರದಲ್ಲಲ್ಲ, ತನ್ನ ಮತದಾರ ಕ್ಷೇತ್ರದ ಜನರ ಮನಸ್ಸಿನಲ್ಲಿ ಇದ್ದರೆ ಸಾಕು ಎನ್ನುವ ನಿಸ್ವಾರ್ಥದಿಂದ ಪ್ರಚಾರ ಬಯಸದೇ ಕೆಲಸ ಮಾಡುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಅತ್ಯುತ್ತಮ ಶಿಕ್ಷಣ ನೀಡಿ ಜನರ ಜೀವನ ಮಟ್ಟ ಸುಧಾರಿಸುವತ್ತ ಗಮನ ಹರಿಸುತ್ತಿರುವ ಮಾಜಿಶಾಸಕರು ಜನರ ಕಷ್ಟಗಳಿಗೆ ಮುಂದಾಗಿ ಮೊದಲು ನೆರವು ನೀಡುವ ಮೂಲಕ ತಾನು ನಿಜವಾದ ಜನಪರ ಕಾಳಜಿಯುಳ್ಳವ ಎನ್ನುವ ಸಾಮಾನ್ಯರಲ್ಲಿ ತಾನು ಎನ್ನುವದನ್ನು ಮೂಡಿಸುತ್ತಿದ್ದಾರೆ. ಅವರಿಗೆ ನನ್ನ ನಮನಗಳು.
ನಾಗರಾಜ ಯಾಜಿ,
ಅಧ್ಯಕ್ಷರು,
ಟೆಂಪೋ ಚಾಲಕರ ಮತ್ತು ಮಾಲಕರ ಯೂನಿಯನ್
ಹೊನ್ನಾವರ