ನಮ್ಮ ಕರ್ನಾಟಕ ಪೋಲೀಸ್ ಅತ್ಯಂತ ಧಕ್ಷತೆ, ಶಿಸ್ತು ಹಾಗೂ ಮಾನವೀಯತೆಗೆ ಸದಾ ಮುಂಚೂಣಿಯಲ್ಲಿರುತ್ತಾರೆ.. ಅದಕ್ಕೊಂದು ಉದಾಹರಣೆ ಇಲ್ಲಿದೆ ನೋಡಿ..
ಲಾಕ್ ಡೌನ್ ಆದಾಗಿನಿಂದ ಜನರು ಸರ್ಕಾರದ ಆದೇಶ ಪಾಲಿಸಿ ತಮ್ಮ ಆರೋಗ್ಯ ದ ರಕ್ಷಣೆಯ ಉದ್ದೇಶದಿಂದ ಮನೆಯಲ್ಲಿಯೇ ಕುಳಿತು ಕಾಲ ಕಳೆಯುವಂಥಹ ಪರಿಸ್ಥಿತಿ ಎದುರಾಗಿದ್ದು ಅನೇಕ ಸಮಸ್ಯೆಗಳನ್ನು ಜನರು ಎದುರಿಸುವಂತೆ ಆಗಿದೆ.. ಒಂದು ಕಡೆ ಕೂಲಿಕಾರರು ಕೆಲಸವಿಲ್ಲದೇ ಆದಾಯದ ಸಮಸ್ಯೆ ಇಂದ ಜೀವನ ಸಾಗಿಸುವುದು ಕಷ್ಟಕರವಾಗಿದೆ…
ವ್ಯಾಪಾರಸ್ಥರು ವ್ಯಾಪಾರ ವಿಲ್ಲದೇ ತಮ್ಮಲ್ಲಿರುವ ಹಣವನ್ನು ಖರ್ಚು ಮಾಡಿ ಕಾಲಕಳೆಯುವಂತೆ ಆಗಿದೆ ..ಆರೋಗ್ಯ ಸಮಸ್ಯೆ ಇರುವವರು ಸರಿಯಾಗಿ ವೈದ್ಯರ ಬಳಿ ಮೊದಲಿನಂತೆ ತೆರಳಿ ತಪಾಸಣೆ ಗೆ ಒಳಪಡುವುದೂ ಕೂಡ ತುಂಬಾ ಸಾಹಸ ಮಾಡಬೇಕಿದೆ.. ಬೇರೆ ಬೇರೆ ಕಾಯಿಲೆಗಳಿಗೆ ಪ್ರತಿನಿತ್ಯ ಔಷಧಿ ಸೇವಿಸುವವರು ಔಷಧಿ ಖಾಲಿಯಾಗಿ ಸಮಯಕ್ಕೆ ಈಗ ಸರಿಯಾಗಿ ಸಿಗದೇ ಇರುವುದರಿಂದ ತುಂಬಾ ತೊಂದರೆ ಅನುಭವಿಸುವಂತಾಗಿದೆ ಹೀಗೆ ಒಂದಲ್ಲಾ ಒಂದು ಸಮಸ್ಯೆ ಗಳು ಜನರನ್ನು ಕಾಡುತ್ತಿದೆ… ಆದರೆ ಸಂಧಿಗ್ದ ಪರಿಸ್ಥಿತಿಯಲ್ಲಿಯೂ ಕೂಡ ಮಾನವೀಯತೆ ಮತ್ತು ನೆರವಾಗುವ ಮನೊಭಾವ ಇವು ಕಷ್ಟದಲ್ಲಿ ಇರುವವರಿಗೆ ಜೀವದಾನ ಮಾಡುತ್ತದೆ ಎಂಬುದು ಸುಳ್ಳಲ್ಲ. .
ಸಮಾಜದ ರಕ್ಷಣೆ ಮತ್ತು ತಪ್ಪಿಸ್ಥರನ್ನು ಕಾನೂನು ಪೃಕ್ರಿಯೆಗೆ ಒಳಪಡಿಸಿ ನಾಡಿನಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸಲು ಸದಾ ಕಟಿಬದ್ಧರಾಗಿ ಹಗಲು ರಾತ್ರಿ ಶ್ರಮಿಸುವ ನಮ್ಮ ಪೋಲಿಸ್ ಸಿಬ್ಬಂದಿ ಹಾಗೂ ಅಧಿಕಾರಿಗಳು ಕೇವಲ ಬೂಟಿನ ಸಪ್ಪಳದೊಂದಿಗೆ ಲಾಠಿ ಬೀಸುವದೊಂದೇ ಕಾಯಕ ಎಂದು ನೀವು ಅಂದುಕೊಂಡಿದ್ದರೆ ಅದು ಖಂಡಿತಾ ತಪ್ಪು.. ಏಕೆಂದರೆ ಸಮಾಜಮುಖಿಯಾಗಿ ಸಂಕಷ್ಟದಲ್ಲಿ ಇರುವವರ ಪಾಲಿಗೆ ದೇವರಾಗಿ ಬಂದು ಜೀವದಾನ ಮಾಡುವ ಪೋಲಿಸರು ನಮ್ಮೆದುರಲ್ಲಿ ಉದಾಹರಣೆಯಾಗಿ ನಿಲ್ಲುತ್ತಾರೆ.. ಇದಕ್ಕೆ ಕುಮಟಾ ಪಿಎಸ್ಐ ಆನಂದಮೂರ್ತಿ ಹಾಗೂ ಸಿಬ್ಬಂದಿ ಸಾಕ್ಷಿ
ಕುಮಟಾದ ಮೂರೂರಿನ ಕಲ್ಲಬ್ಬೆಯ ಮಂಜುನಾಥ ಹೆಗಡೆ ಯವರಿಗೆ ಕ್ಯಾನ್ಸರ್ ನ ಔಷಧಿ ಖಾಲಿಯಾಗಿ ಎಲ್ಲಿಯೂ ಸಿಗದೇ ತೊಂದರೆ ಅನುಭವಿಸಬೇಕಾದ ಪರಿಸ್ಥಿತಿ ಬಂದಾಗ ಆ ಭಾಗದ ಬೀಟ್ ಪೋಲೀಸ್ ಸಿಬ್ಬಂದಿ ಶ್ರೀಧರ ತಾಂಡೇಲರವರಿಗೆ ಹೆಗಡೆಯವಯ ಕುಟುಂಬದವರು ವಿಷಯ ತಿಳಿಸುತ್ತಾರೆ ತಾಂಡೇಲರವರು ಕೂಡಲೇ ಕುಮಟಾ ಪಿಎಸ್ಐ ಆನಂದಮೂರ್ತಿ ಯವರ ಗಮನಕ್ಕೆ ತಂದರು ತಕ್ಷಣ ಪಿಎಸ್ಐ ರವರು ಕುಮಟಾ ದ ದಾಮೋದರ ಮೆಡಿಕಲ್ ನ ಅರವಿಂದ್ ಪೈ ರವರಿಗೆ ಈ ಔಷಧಿ ಯನ್ನು ಕೂಡಲೇ ತರಿಸುವಂತೆ ವಿನಂತಿಸಿದರು ನಂತರ ಪೈ ರವರು ಮಂಗಳೂರಿನಿಂದ ಆ ಔಷಧಿ ತರಿಸಿ ಪಿಎಸ್ಐ ರವರಿಗೆ ನೀಡಿದರು ರಾತ್ರಿ 9 ಗಂಟೆಗೆ ಕಲ್ಲಬ್ಬೆಗೆ ಆನಂದಮೂರ್ತಿ ರವರು ಸಿಬ್ಬಂದಿಗಳೊಡನೆ ತೆರಳಿ ಮಂಜುನಾಥ ಹೆಗಡೆ ಯವರಿಗೆ ಔಷಧಿಯನ್ನು ನೀಡಿ ಹೆಗಡೆ ಯವರ ಕುಟುಂಬ ಕ್ಕೆ ನೆರವಾದರು..
ಹಾಗೇಯೇ ಮಂಗಳವಾರ (ಇಂದು) ಕೂಡ ಕುಮಟಾ ದ ಹೆರವಟ್ಟಾ ದ ಗೀತಾ ಉದಯ ಮಡಿವಾಳ ರವರಿಗೂ ಕೂಡ ಇದೇ ಸಂಬಂಧಪಟ್ಟ ಔಷಧಿ ಸಿಗದೇ ಅವರೂ ಕೂಡ ಪರದಾಡುವಂತಾಗಿತ್ತು ನಂತರ ಹೆರವಟ್ಟಾ ಭಾಗದ ಬೀಟ್ ಪೋಲೀಸ್ ಸಂದೇಶ ನಾಯಕ ರವರ ಗಮನಕ್ಕೆ ಸುವರ್ಣ ರವರ ಕುಟುಂಬ ವಿನಂತಿಸಿದಾಗ ಸಂದೇಶ ರವರು ಪಿಎಸ್ಐ ರವರ ಗಮನಕ್ಕೆ ತಂದು ಅರವಿಂದ್ ಪೈ ರವರ ಮುಖಾಂತರ ತರಿಸಿ ಇಂದು ರಾತ್ರಿ ಗೀತಾ ಮಡಿವಾಳ ರವರ ಮನೆಗೆ ಪಿಎಸ್ಐ ಆನಂದಮೂರ್ತಿ ಯವರು ತಮ್ಮ ಸಿಬ್ಬಂದಿ ಗಳೊಡನೆ ತೆರಳಿ ಔಷಧಿ ನೀಡಿ ಅವರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದರು..ಎರಡೂ ಕುಟುಂಬಗಳು ಪೋಲೀಸ್ ಇಲಾಖೆಗೆ ಕೈಜೋಡಿಸಿ ಧನ್ಯವಾದ ತಿಳಿಸಿದರು.. ಅದೇ ರೀತಿ ಪಿಎಸ್ಐ ಆನಂದಮೂರ್ತಿಯವರ ನಿರ್ದೇಶನದ ಮೇರೆಗೆ ಕುಮಟಾ ಗ್ರಾಮೀಣದ ವಿವಿಧ ಭಾಗದ ಬೀಟ್ ಪೋಲೀಸರು ಹಳ್ಳಿಗಳ ಜನರಿಗೆ ಕುಮಟಾದ ವಿವಿಧ ಮೆಡಿಕಲ್ ನಲ್ಲಿ ದೊರೆಯುವ ಔಷಧಿ ತೆಗೆದುಕೊಂಡು ಹೋಗ ವಿತರಿಸುವ ಉತ್ತಮ ಕಾರ್ಯ ಮಾಡುತ್ತಿದ್ದಾರೆ..
ಇಂತಹ ಜನಪರವಾಗಿ ಜನರ ಕಷ್ಟಗಳಿಗೆ ಸ್ಪಂದಿಸುವ ಅಧಿಕಾರಿ ಹಾಗೂ ಸಿಬ್ಬಂದಿಗಳು ಇರುವುದರಿಂದಲೇ ಇಲಾಖೆಗೆ ಉತ್ತಮ ಹೆಸರು ಹಾಗೂ ಗೌರವ ಸಲ್ಲುತ್ತಿರುವುದು…