ಹೊನ್ನಾವರ: ತಾಲೂಕಿನ ಸಾಲಕೋಡ ಗ್ರಾಮದ ಮಹಿಳೆಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡ ಪರಿಣಾಮ ಆಸ್ಪತ್ರೆಗೆಂದು 108 ಆ್ಯಂಬುಲೆನ್ಸ್ ನಲ್ಲಿ ಸಾಗಿಸುವಾಗ ಮಾರ್ಗಮದ್ಯೆ ಆ್ಯಂಬುಲೆನ್ಸ್ ನಲ್ಲಿಯೇ ಹೆರಿಗೆಯಾದ ಘಟನೆ ನಡೆದಿದೆ.
ಸಾಲಕೋಡ ಗ್ರಾಮದ ಸುಮಾ ನಾಯ್ಕ ಎನ್ನುವವರಿಗೆ ಮಂಗಳವಾರ ಹೆರಿಗೆ ನೋವು ಕಾಣಿಸಿಕೊಂಡಿತ್ತು.ತಕ್ಷಣ ಮನೆಯವರು 108 ಕ್ಕೆ ಕರೆಮಾಡಿ ಆ್ಯಂಬುಲೆನ್ಸ್ ಗೆ ಮಾಹಿತಿ ನೀಡಿದ್ದಾರೆ.ಸಮಯಕ್ಕೆ ಸರಿಯಾಗಿ ಆಗಮಿಸಿದ ಆ್ಯಂಬುಲೆನ್ಸ್ ಮಹಿಳೆಯನ್ನು ಆಸ್ಪತ್ರೆಗೆ ಕೊಂಡೊಯ್ಯುವಾಗ ಮಾರ್ಗಮಧ್ಯೆಯೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.108 ತುರ್ತು ಆರೋಗ್ಯ ಶುಶ್ರೂಷಕಿ ಮಾಲಿನಿ ಗೌಡ ಅವರು ದಾರಿಮದ್ಯೆ ಆ್ಯಂಬುಲೆನ್ಸ್ ನಿಲ್ಲಿಸುವಂತೆ ತಿಳಿಸಿದಾಗ ತಕ್ಷಣ 108 ವಾಹನದ ಚಾಲಕ ಯಶೋಧರ ನಾಯ್ಕ ವಾಹನ ನಿಲ್ಲಿಸಿದ್ದಾರೆ.ತಕ್ಷಣ ಮಾಲಿನಿ ಅವರು ಸಮಯಪ್ರಜ್ಞೆಯಿಂದ ಸುಮಾ ಅವರಿಗೆ ಸಹಜ ಹೆರಿಗೆ ಆಗುವಲ್ಲಿ ನೆರವಾಗಿದ್ದು,ಮಗು ಹಾಗೂ ತಾಯಿ ಆರೋಗ್ಯವಾಗಿದ್ದಾರೆ ಎನ್ನಲಾಗಿದೆ.ಹೆಚ್ಚಿನ ಚಿಕಿತ್ಸೆಗಾಗಿ ಹೊನ್ನಾವರ ತಾಲೂಕಾ ಆಸ್ಪತ್ರೆಗೆ ದಾಖಲಿಸಲಾಗಿದೆ.