ಕುಮಟಾ : ವಿಶ್ವವೇ ಕೊರೋನಾ ವೈರಸ್ ನಿಂದ ತತ್ತರಿಸಿರುವ ಸಂದರ್ಭದಲ್ಲಿ, ನಮ್ಮ ಕುಮಟಾ ದಲ್ಲಿಯೂ ಹಲವು ಇಲಾಖೆಗಳ ಸಿಬ್ಬಂದಿಗಳು ಜನತೆಯ ರಕ್ಷಣೆಯಲ್ಲಿ ತೊಡಗಿದ್ದಾರೆ..ಅಂತೆಯೇ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತರು ತಮ್ಮ ತಮ್ಮ ವ್ಯಾಪ್ತಿಯ ಪ್ರತಿ ಮನೆಗಳಿಗೂ ಭೇಟಿನೀಡಿ, ಮಾಹಿತಿ ಸಂಗ್ರಹಿಸಿ ಕೊರೋನಾ ನಿರ್ಮೂಲನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಅವರ ಇಂತಹ ಕಾರ್ಯ ಅಭಿನಂದನಾರ್ಹವಾಗಿದೆ..

RELATED ARTICLES  ಸ್ಕೌಟ್ ಗೈಡ್ ದಶಮಾನೋತ್ಸವ ಸರಳ ಸಮಾರಂಭ


ಇಂದು ಕುಮಟಾ ತಾಲೂಕಿನ ಮಿರ್ಜಾನ, ಬರ್ಗಿ ಹಾಗೂ ಹಿರೆಗುತ್ತಿ ಪಂಚಾಯತಿಗಳ ವ್ಯಾಪ್ತಿಯಲ್ಲಿ ಕೊರೋನಾ ವಿರುದ್ಧ ಜನರ ರಕ್ಷಣೆಯಲ್ಲಿ ತೊಡಗಿರುವ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಹಿರೇಗುತ್ತಿಯ ಸಿಬ್ಬಂದಿಗಳಿಗೆ (ಒಟ್ಟೂ 60 ಕ್ಕೂ ಹೆಚ್ಚಿನ ಜನರಿಗೆ) ದಿ.ಮೋಹನ್ ಕೆ.ಶೆಟ್ಟಿ ಟ್ರಸ್ಟ್ ವತಿಯಿಂದ ಕ್ಷೇತ್ರದ ಮಾಜಿ ಶಾಸಕಿಯರಾದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ದಿನಸಿ ಸಾಮಗ್ರಿಗಳ ಕಿಟ್ ವಿತರಿಸಿ ಅವರ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದರುು.

RELATED ARTICLES  ಗೋಕರ್ಣ ಪಂಚಾಯತಿ ವ್ಯಾಪ್ತಿಯಲ್ಲಿ ಕರೋನಾ ವಾರಿಯರ್ಸಗೆ ದಿ.ಮೋಹನ್ ಕೆ.ಶೆಟ್ಟಿ ಟ್ರಸ್ಟ್ ವತಿಯಿಂದ ಅಗತ್ಯ ವಸ್ತುಗಳ ಕಿಟ್ ವಿತರಣೆ
IMG 20200422 WA0009

ಈ ಸಂದರ್ಭದಲ್ಲಿ ಕುಮಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿ.ಎಲ್.ನಾಯ್ಕ, ಆರೋಗ್ಯಾಧಿಕಾರಿಗಳು, ಮುಖಂಡರಾದ ರವಿಕುಮಾರ್ ಎಂ‌.ಶೆಟ್ಟಿ, ಚಂದ್ರಹಾಸ ನಾಯಕ, ಜಗದೀಶ್ ಹರಿಕಂತ್ರ ,ಆನಂದು ನಾಯಕ, ಬೀರಣ್ಣ ನಾಯಕ, ಬೊಮ್ಮಯ್ಯ ಹಳ್ಳೇರ ಮನೋಜ ನಾಯಕ, ಸಂತೋಷ ನಾಯ್ಕ ಮಂತಾದವರು ಹಾಜರಿದ್ದರು.