ರಜೆ ಎಂದರೆ ಸಾಕು ಮಕ್ಕಳು ಹುರ್ರೆ ಎಂದು ಕುಣಿದು ಕುಪ್ಪಳಿಸುತ್ತಾರೆ. ಬೇಸಿಗೆಯ ರಜೆಯಲ್ಲಿ ಮಕ್ಕಳು ಹೊರಗೆ ಅಟ ಅಡಿ ಪ್ರವಾಸ ಹೋಗಿ ಬಂದು ಕಾಲ ಕಳೆಯುತ್ತಿದ್ದರು.
ಅದರೆ ಈ ಕರೋನಾ ರಜೆ ಮನೆಯಲ್ಲಿ ಅವರನ್ನು ಬಂದಿಸಿಬಿಟ್ಟಿದೆ. ಮನೆಯ ಕೆಲಸ ಹೆಚ್ಚಾದರೆ ಮನೆ ಪಾಠ ಪರೀಕ್ಷೆ ಸಮಸ್ಯೆ ಮಕ್ಕಳಿಗೆ ಎದುರಾಗಿದೆ. ಈ ಕರೋನಾ ರಜೆ ಮನೆಯಲ್ಲಿದ್ದು ಕಾಲ ಕಳೆವ ಪರಿಸ್ಥಿತಿ ಒದಗಿಸಿದ್ದಲ್ಲದೆ
ಬೇಸರ ಕಳೆಯಲು ಮಾರ್ಗ ಕಂಡುಹಿಡಿಯಲು ತವಕಗೊಂಡಿದೆ. ಮನೆಯಲ್ಲಿ ಅಡುವ ಅಟದ ವಸ್ತುಗಳು ಹೊರಗೆ ಬಂದಿವೆ. ಅನ್ಲೈನ್ ತರಗತಿಗಳು ನಡೆಯುತ್ತಿವೆ.
ಕಲೆ ಕಸೂತಿ ಬೆಳಕು ಕಾಣುತ್ತಿದೆ.
ಕಾರಣ ಮಕ್ಕಳ ಸುಪ್ತ ಮನಸಿಗೆಜಾಗ್ರತಿ ದೊರೆಯುವ ಕಾಲ ಇದಾಗಿದೆ. ಮನೆ ಊಟ ತಿಂಡಿಗೆ ಮಕ್ಕಳು ಒಗ್ಗುತ್ತಿದ್ದಾರೆ. ಕೆಲವು ಮಕ್ಕಳು ಶಾಲೆಗೆ ರಜವೆಂದು ಮುದಗೊಂಡಿದ್ದಾರೆ. ಈ ಕರೋನಾದ ಬಗ್ಗೆ ಓದಲು ಹಾಡಲು ತಮಾಷೆ ತುಣುಕುಗಳು ಹಾಡುಗಳು ಕತೆ ಇವೆಲ್ಲ ಮೂಡುತ್ತಿವೆ. ಮಕ್ಕಳಿಗೆ ಸಾಕಷ್ಟು ಬಿಡುವು ಇದ್ದು ಅವುಗಳ ಸದುಪಯೋಗಕ್ಕೆ ಅವಕಾಶ ಸಿಗುತ್ತಿದೆ.
ಒಟ್ಟಿನಲ್ಲಿ ಕರೋನಾ ಭಯಾನಕ ಮಹಾಮಾರಿಯಾದರೂ ಈ ರಜೆಯ ವಾತಾವರಣ ಮನಸಿಗೆ ಮನೆಗೆ ಮಕ್ಕಳಿಗೆ ಹೊಸ ರೂಪ ನೀಡಿದೆ. ಪರಸ್ಪರ ಸಹಕಾರ ಹೊಂದಾಣಿಕೆ ಪ್ರೀತಿ ಬೆಳೆಯಬೇಕೆ ವಿನಃ ಇದು ಜಗಳ ದ್ವೇಷ ಅಸೂಯೆ ಭಿನ್ನಾಭಿಪ್ರಾಯಗಳ ಮಡಿಲಾಗಬಾರದು. ಮನೆಯಿಂದ ಕಲಿಯಿರಿ ಮನಸನ್ನು ಗೆಲ್ಲಿರಿ ಭವಿಷ್ಯಕ್ಕೆ ಸಿದ್ದವಾಗಿರಿ ಓ ಮಕ್ಕಳೇ!
ಕಲ್ಪನಾಅರುಣ
ಬೆಂಗಳೂರು