ಹೊನ್ನಾವರ : ಬಡ ಮಧ್ಯಮ ವರ್ಗದ ಕೃಷಿಕರೇ ತುಂಬಿರುವ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಮಾಳ್ಕೋಡ್ ಗ್ರಾಮದ ನಾಗರಿಕರು ಪ್ರಧಾನ ಮಂತ್ರಿ ಕೊರೋನಾ ನಿಧಿಗೆ ಸುಮಾರು 17,550 ರೂಪಾಯಿಗಳ ಧನ ಸಹಾಯ ಮಾಡಿರುತ್ತಾರೆ. ಈ ಮೊತ್ತವನ್ನು ಶಾಸಕರಾದ ಶ್ರೀ ಸುನೀಲ್ ನಾಯ್ಕರಿಗೆ ಹಸ್ತಾಂತರಿಸಲಾಯ್ತು. ಸಹಾಯ ಧನ ಸಂಗ್ರಹಿಸುವಲ್ಲಿ ಗ್ರಾಮದ ಭಾ.ಜ.ಪಾ ಘಟಕ ಸಹಕಾರ ನೀಡಿರುತ್ತದೆ.
RELATED ARTICLES ಯಕ್ಷಕಲಾ ಭಿತ್ತಿಚಿತ್ರ (Mural Painting) ಕಾರ್ಯಾಗಾರ ಕೇರಳದ ಭಿತ್ತಿಚಿತ್ರ ಯಕ್ಷಗಾನಕ್ಕೆ ಆಲಿಂಗನ
ಈ ಮೂಲಕ ದೇಶದ ಈ ಸಂಕಷ್ಟದ ಸಮಯದಲ್ಲಿ ದೇಶ ಮತ್ತು ಪ್ರಧಾನ ಮಂತ್ರಿ ಯವರ ಜೊತೆಗೆ ನಾವು ಇದ್ದೇವೆ ಎಂಬ ಸಂದೇಶ ರವಾನಿಸಿರುತ್ತಾರೆ.