ಹೊನ್ನಾವರ: ಯೋಧರು ಗಡಿಯಲ್ಲಿ ನಿಂತು ದೇಶರಕ್ಷಣೆಯಲ್ಲಿ ತೊಡಗಿರುವಂತೆ, ಕೊರೋನಾ ಸೋಂಕು ಇಂದು ವಿಶ್ವಕ್ಕೆ ಮಾರಕವಾಗಿ ಪರಿಣಮಿಸುತ್ತಿರುವ ಸಂದರ್ಭದಲ್ಲಿ ಇದರ ವಿರುದ್ಧ ಜನತೆಯ ರಕ್ಷಣೆಯಲ್ಲಿ ಕೆಲವು ಇಲಾಖೆ ಸಿಬ್ಬಂದಿಗಳು ಕೊರೋನಾ ವಾರಿಯರ್ಸ್ ಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅವರಲ್ಲಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಪ್ರಮುಖರು, ಇವರು ಮನೆ ಮನೆಗಳಿಗೆ ಭೇಟಿನೀಡಿ ದತ್ತಾಂಶ ಸಂಗ್ರಹಿಸಿ, ತಳಮಟ್ಟದಿಂದಲೆ ಕೊರೋನಾ ನಿರ್ಮೂಲನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ….
ಅದರಂತೆ ಹೊನ್ನಾವರದ ಸಾಲ್ಕೋಡು, ಹೊಸಾಕುಳಿ, ಕಡ್ಲೆ ಮತ್ತು ಮುಗ್ವಾ ಪಂಚಾಯತ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಸಾಲ್ಕೋಡು ಇಲ್ಲಿನ ಸಿಬ್ಬಂದಿಗಳಿಗೆ(ಓಟ್ಟೂ 60 ಕ್ಕೂ ಹೆಚ್ಚು) ದಿ.ಮೋಹನ್ ಕೆ.ಶೆಟ್ಟಿ ಟ್ರಸ್ಟ್ ವತಿಯಿಂದ ಕ್ಷೇತ್ರದ ಮಾಜಿ ಶಾಸಕಿಯರಾದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ದಿನಸಿ ಸಾಮಗ್ರಿಗಳ ಕಿಟ್ ವಿತರಿಸಿ, ಅವರ ಅವಿರತ ಕಾರ್ಯವನ್ನು ಶ್ಲಾಘಿಸಿದರು…
ಈ ಸಂದರ್ಭದಲ್ಲಿ ವೈಧ್ಯಾಧಿಕಾರಿಗಳು ಮುಖಂಡರಾದ ರವಿಕುಮಾರ್ ಎಂ.ಶೆಟ್ಟಿ, ಸಂದೇಶ ಶೆಟ್ಟಿ, ಗಜಾನನ ನಾಯ್ಕ, ವಿನಾಯಕ ಶೇಟ್, ಪರಮೇಶ್ವರ್ ನಾಯ್ಕ, ಸಂತೋಷ, ವಿನೋದ ಮುಂತಾದವರು ಹಾಜರಿದ್ದರು….