ಯಲ್ಲಾಪುರದ: ವರ್ಷಾ ಸ್ಟುಡಿಯೋ ನಕಲಿ ಪಾಸ್‌ಗಳನ್ನು ಪ್ರಿಂಟ್ ಮಾಡಿ ಹಂಚಿದ್ದಾಗಿ ತಡವಾಗಿ ಬೆಳಕಿಗೆ‌ ಬಂದಿದೆ.

ಲಾಕ್ ಡೌನ್ ಸಂದರ್ಭದಲ್ಲಿ ಪಾಸ್‌ನ್ನು ಪ್ರಿಂಟ್ ಮಾಡಿ ಜನರಿಗೆ ಹಂಚಿದ್ದು ಆ ಎಲ್ಲ ಪಾಸ್‌ಗಳು ಅಧಿಕೃತವಲ್ಲ, ಅವೆಲ್ಲವೂ ನಕಲಿ ಆಗಿವೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.

RELATED ARTICLES  ಯಾವುದೇ ವಿಧಾನದಲ್ಲಾದರೂ ಉಕ್ರೇನ್ ತೊರೆಯಿರಿ : ಭಾರತೀಯ ರಾಯಭಾರಿ ಕಚೇರಿ ಮಾಹಿತಿ.

ಅಲ್ಲಿಂದ ಪಾಸ್ ಪಡೆದವರೆಲ್ಲರೂ ತಕ್ಷಣ ಯಲ್ಲಾಪುರ ಠಾಣೆಗೆ ಅದನ್ನು ತಂದು ಒಪ್ಪಿಸಬೇಕು. ಇಲ್ಲವಾದರೆ ಅಂಥವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವುದಾಗಿ ಸಿಪಿಐ ಸುರೇಶ ಯಳ್ಳೂರ ತಿಳಿಸಿದ್ದಾರೆ.

ನಕಲಿ ಪಾಸ್ ಮಾಡಿ, ಜನರಿಗೆ ನೀಡುತ್ತಿದ್ದರು ಎಂದು ವರ್ಷಾ ಸ್ಟುಡಿಯೊ ಮಾಲೀಕ ಪ್ರಕಾಶ ಕಟ್ಟಿಮನಿ ಹಾಗೂ ರವೀಂದ್ರ ನಗರದ ಧೀರಜ ತಿನೆಕರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

RELATED ARTICLES  ವಿಧುಶೇಖರ ಭಾರತೀ ಮಹಾಸ್ವಾಮಿಗಳ ಆಶೀರ್ವಾದ ಪಡೆದ ದಿನಕರ ಶೆಟ್ಟಿ.

ಅವರಿಂದ 65 ನಕಲಿ ಪಾಸ್ ವಶಪಡಿಸಿಕೊಂಡಿದ್ದಾರೆ. ನ್ಯಾಯಾಲಯಕ್ಕೆ ಬಂಧಿತರನ್ನು ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.