ಕುಮಟಾ: ಪಟ್ಟಣದ ಪುರಾತನ ಪ್ರಸಿದ್ಧವಾದ ದೇವಾಲಯಗಳಲ್ಲಿ ಒಂದಾದ ರಥಬೀದಿಯಲ್ಲಿರುವ ಶ್ರೀ ಶಾಂತೇರಿ ಕಾಮಾಕ್ಷಿ ರಾಮನಾಥ ಲಕ್ಷ್ಮೀನಾರಾಯಣ ದೇವಸ್ಥಾನದ ವತಿಯಿಂದ ಪ್ರಧಾನ ಮಂತ್ರಿಯವರ ಕೋವಿಡ್ ಸಂತ್ರಸ್ತರ ನಿಧಿಗೆ ಒಂದು ಲಕ್ಷ ರೂಪಾಯಿಯನ್ನು ಇಂದು ನೀಡಲಾಯಿತು.

ಇಂದು ಬೆಳಿಗ್ಗೆ ಕುಮಟಾದ ಸಹಾಯಕ ಆಯುಕ್ತರಾದ ಎಂ ಅಜಿತ್ ರವರು ಕುಮಟಾದ ರಥಬೀದಿಯಲ್ಲಿರುವ ಶ್ರೀ ಶಾಂತೇರಿ ಕಾಮಾಕ್ಷಿ ರಾಮನಾಥ ಲಕ್ಷ್ಮೀನಾರಾಯಣ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ಈ ಸಂಧರ್ಭದಲ್ಲಿ ದೆವಸ್ಥಾನದ ಅಧ್ಯಕ್ಷರಾದ ಗೋಪಾಲ ವಾಮನ ಕಿಣಿ ಹಾಗೂ ಸದಸ್ಯರ ಸಮ್ಮುಖದಲ್ಲಿ ಕುಮಟಾ ಸಹಾಯಕ ಆಯುಕ್ತರಾದ ಎಂ ಅಜಿತರವರ ಮುಖಾಂತರ ಪ್ರಧಾನ ಮಂತ್ರಿಯವರ ಕೋವಿಡ್ ಸಂತ್ರಸ್ತರ ನಿಧಿಗೆ, ಇಂದು ಒಂದು ಲಕ್ಷ ರೂಪಾಯಿ ದೇಣಿಗೆಯ ಚೆಕ್ ನೀಡಿದರು.

RELATED ARTICLES  ಅಪಘಾತದಿಂದ ಆಸ್ಪತ್ರೆ ಸೇರಿದ್ದ ಬಿಜೆಪಿ ಕಾರ್ಯಕರ್ತ ಇನ್ನಿಲ್ಲ. : ಆಸ್ಪತ್ರೆಯಲ್ಲಿ ಸಾವು.

ಚೆಕ್ ಸ್ವಿಕರಿಸಿದ ಸಹಾಯಕ ಆಯುಕ್ತರು ದೆವಸ್ಥಾನದ ಆಡಳಿತ ಮಂಡಳಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿ ಧನ್ಯವಾದಗಳನ್ನು ತಿಳಿಸಿದರು.

ದೆವಸ್ಥಾನದ ಅಧ್ಯಕ್ಷರಾದ ಗೋಪಾಲ ವಾಮನ ಕಿಣಿ ಮಾತನಾಡಿ ಜಗತ್ತಿಗೆ ದೊಡ್ಡ ಅನಾಹುತ ಬಂದಿದೆ. ನಮ್ಮ ದೇಶದ ಪ್ರಧಾನಿಯವರು ಸಂಕಷ್ಟದಲ್ಲಿರುವ ದೇಶದ ಜನರ ಪರಿಹಾರಕ್ಕಾಗಿ ಮಾಡುತ್ತಿರುವ ಕೆಲಸಕ್ಕೆ ಎಲ್ಲರೂ ಕೈಜೋಡಿಸಬೇಕು. ಈ ನಿಟ್ಟಿನಲ್ಲಿ ನಾವು ದೇವರಲ್ಲಿ ಪ್ರಾರ್ಥಿಸಿ ಒಂದು ಲಕ್ಷ ರೂಪಾಯಿಗಳ
ಮೊತ್ತವನ್ನು ನೀಡಿದ್ದೇವೆ. ಆದಷ್ಟು ಬೇಗ ಎಲ್ಲರೂ ಆರೋಗ್ಯವಂತರಾಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇವೆ ಎಂದರು.

RELATED ARTICLES  “ಹದಿಹರೆಯವನ್ನು ಸರಿಯಾಗಿ ನಿರ್ವಹಿಸಿದ್ದರೆ ಗುರಿ ತಲಪಲು ಸಾದ್ಯ” ಪ್ರದೀಪ್ ನಾಯ್ಕ

ಈ ಸಂದರ್ಭದಲ್ಲಿ ಶೇಷಗಿರಿ ಶಾನಬಾಗ,ರಾಮಕೃಷ್ಣ ಪೈ,ಅರವಿಂದ ಗೋಳಿ,ಸತೀಶ ಶಾನಬಾಗ,ರಾಮಕೃಷ್ಣ ಗೋಳಿ, ಅರ್ಚಕರಾದ ವರದರಾಜ್ ಭಟ್ ,ಆನಂದ ಭಟ್, ಗುರುರಾಜ ಶಾನಭಾಗ,ವಿಜಯಾನಂದ ಗೋಳಿ ಮುಂತಾದವರು ಉಪಸ್ಥಿತರಿದ್ದರು.