ಕುಮಟಾ: ಇತ್ತೀಚೆಗೆ ನಡೆದ ಬಾಡ ವಲಯಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವೀರಾಗ್ರಣಿಗಳಾಗಿ ಹೊರಹೊಮ್ಮಿದ್ದಾರೆ. ರಕ್ಷಿತಾ ಪಟಗಾರ, ಚೈತ್ರಾ ನಾಯಕ, ಪ್ರಣೀತ ಕಡ್ಲೆ, ನುಸೈಬಾ ಸಾಬ್, ಸುಪ್ರಸನ್ನ ಗುನಗಾ ಇವರು ಕ್ರಮವಾಗಿ ಕನ್ನಡ, ಕೊಂಕಣಿ, ಹಿಂದಿ, ಸಂಸ್ಕøತ ಮತ್ತು ಆಶುಭಾಷಣ ಸ್ಪರ್ಧೆಗಳಲ್ಲಿ ಮೊದಲಿಗರಾದರೆ, ದರ್ಶನ್ ಪುರಾಣಿಕ ಭಾವಗೀತೆ ಮತ್ತು ಜಾನಪದ ಗೀತೆಗಳೆರಡರಲ್ಲೂ ಪ್ರಥಮ ಸ್ಥಾನಗಳಿಸಿದ್ದು, ಅಕ್ಷತಾ ಪಟಗಾರ, ಶ್ರೀಲಕ್ಷ್ಮೀ ಭಟ್ಟ, ಸೌಂದರ್ಯಾ ನಾಯ್ಕ, ಸ್ನೇಹಾ ಪಟಗಾರ, ರಂಜಿತಾ ಹರಿಕಂತ್ರ ಸಂಗೀತ ಕಲೋತ್ಸವದಲ್ಲಿ, ಪೂಜಾ ನಾಯರ್ ಭರತನಾಟ್ಯದಲ್ಲಿ ಆಯ್ಕೆಯಾಗಿದ್ದಾರೆ. ಪ್ರಥಮ ಶೇಟ್, ನಿಶ್ಚಿತ್ ಹಿಣಿ ಛದ್ಮವೇಷದಲ್ಲೂ ತಾಲೂಕಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

RELATED ARTICLES  ಕಾರ್ಯಕ್ರಮದಲ್ಲಿ ತಲೆಸುತ್ತು ಬಂದು ಪ್ರಜ್ಞೆ ತಪ್ಪಿದ ಉತ್ತರ ಕನ್ನಡ ಜಿಲ್ಲಾಧಿಕಾರಿಗಳು