ಕೆಲವು ಸೋಶಿಯಲ್ ಮೀಡಿಯಾದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಆಸ್ಪತ್ರೆಗೆ ತೆರಳಲು ಇನ್ನೂ ತಡೆಹಿಡಿಯಲಾಗುತ್ತಿದೆ ಎಂದು ಸುದ್ದಿ ಹಬ್ಬಿಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಶಾಸಕ ದಿನಕರ ಶೆಟ್ಟಿ ಯವರು
ನಮ್ಮ ಉತ್ತರ ಕನ್ನಡ ಜಿಲ್ಲೆ ಯಿಂದ ಅನಾರೋಗ್ಯ ದಿಂದ ಬಳಲುತ್ತಿರುವವರಿಗೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿನ ಆಸ್ಪತ್ರೆಗೆ ತೆರಳಲು ಅನುಮತಿ ನೀಡುತ್ತಿರಲಿಲ್ಲ.. ಜಿಲ್ಲೆಯ ಗಡಿ ಭಾಗ ಶಿರೂರಿನಲ್ಲಿ ತಡೆದು ವಾಪಸ್ ಕಳುಹಿಸುತ್ತಿದ್ದರು.. ನಂತರ ಜಿಲ್ಲೆಯ ಅನೇಕ ಭಾಗಗಳಿಂದ ನನಗೆ ದೂರವಾಣಿ ಮುಖಾಂತರ ದೂರು ಬಂದಾಗ ನಾನು ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ರವರಿಗೆ ಕರೆ ಮಾಡಿ ಸಮಸ್ಯೆ ಬಗ್ಗೆ ಸಂಪೂರ್ಣ ಮಾಹಿತಿ ಕೊಟ್ಟು ಮನವರಿಕೆ ಮಾಡಿದ ನಂತರ ಅವರು ತಕ್ಷಣ ಉಡುಪಿ ಹಾಗೂ ನಮ್ಮ ಜಿಲ್ಲೆಯ ಜಿಲ್ಲಾಧಿಕಾರಿ ಗಳ ಜೊತೆ ಆರೋಗ್ಯ ಸಮಸ್ಯೆ ಇರುವವರಿಗೆ ತಡೆಯಬೇಡಿ ಸಂಬಂಧಪಟ್ಟ ವೈದ್ಯರ ಪತ್ರ ಹಾಗೂ ಅವರ ಆರೋಗ್ಯ ಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ತೋರಿಸಿದಾಗ ಅವರನ್ನು ಆಸ್ಪತ್ರೆಗೆ ಕಳುಹಿಸುವ ವ್ಯವಸ್ಥೆ ಮಾಡಿ ಎಂದು ಚರ್ಚಿಸಿದ ನಂತರ ಪುನಃ ನನಗೆ ವಿಜಯ ಭಾಸ್ಕರ್ ರವರು ಮೆಸೇಜ್ ಮಾಡಿ ಮಾಹಿತಿ ನೀಡಿದ್ದಾರೆ.
ನಂತರ ಉಡುಪಿ ಜಿಲ್ಲಾಧಿಕಾರಿಯವರು ಕೂಡ ನನಗೆ ಕರೆ ಮಾಡಿ ಆರೋಗ್ಯ ತಪಾಸಣೆ ಗೆ ಆಸ್ಪತ್ರೆಗೆ ಹೋಗುವವರನ್ನು ತಡೆಯುವುದಿಲ್ಲ ಚೆಕ್ ಪೋಸ್ಟ್ ಗೆ ಆದೇಶ ಮಾಡಿದ್ದೇನೆ ಎಂದು ತಿಳಿಸಿದ್ದಾರೆ… ಇದಾದ ನಂತರ ಈಗ ಸುಮಾರು ಒಂದು ವಾರದಿಂದ ಸಾಕಷ್ಟು ಸಂಖ್ಯೆಯಲ್ಲಿ ಆರೋಗ್ಯ ತಪಾಸಣೆ ಗೆ, ಚಿಕಿತ್ಸೆ ಗೆ ಜನರು ಹೋಗಿ ಬಂದು ಮಾಡುತ್ತಿದ್ದಾರೆ..ಅನೇಕರು ಧನ್ಯವಾದ ಕೂಡ ಕರೆ ಮಾಡಿ ತಿಳಿಸಿದ್ದಾರೆ..
ಆದರೆ ನಾನು ಜನರಿಗಾಗಿ ಮಾಡಿದ ಈ ಒಂದು ಕೆಲಸ ಸಹಿಸಲಾಗದ ಕೆಲವು ವ್ಯಕ್ತಿಗಳು ಇನ್ನೂ ಶಿರೂರಿನಲ್ಲಿ ತಡೆಮಾಡುತ್ತಿದ್ದಾರೆ ಹೋಗಲು ಕೊಡುವುದಿಲ್ಲ ಶಾಸಕರು ಸುಳ್ಳು ಹೇಳುತ್ತಿದ್ದಾರೆ ಎನ್ನುವ ರೀತಿಯಲ್ಲಿ ಜನರಲ್ಲಿ ತಪ್ಪು ಭಾವನೆ ಮೂಡಿಸುವ ಕೆಲಸ ಮಾಡುತ್ತಿರುವುದು ಬೆಳಕಿಗೆ ಬಂದಿದೆ.. ..ದಯವಿಟ್ಟು ಸಾರ್ವಜನಿಕರು ಇದಾವುದಕ್ಕೂ ಕಿವಿಗೊಡದೇ ತಮ್ಮ ಆರೋಗ್ಯ ತಪಾಸಣೆ ಗೆ, ಅಥವಾ ಚಿಕಿತ್ಸೆ ಗೆ ತಮ್ಮ ದಾಖಲೆಗಳನ್ನು ಇಟ್ಟುಕೊಂಡು ಮತ್ತು ಆಯಾ ತಾಲ್ಲೂಕಿನ ತಹಶೀಲ್ದಾರ್ ಮುಖಾಂತರ ಜಿಲ್ಲಾಡಳಿತದ ಪರವಾನಗಿ ಪಡೆದು ಹೋಗಿ ಬರಬಹುದಾಗಿದೆ ಇನ್ನೂ ಜನರಿಗೆ ಸರಳ ಗೊಳಿಸುವ ಉದ್ದೇಶದಿಂದ ನಾನು ಸನ್ಮಾನ್ಯ ಮುಖ್ಯಮಂತ್ರಿ ಯಯಡಿಯೂರಪ್ಪ ನವರಿಗೂ ನಾನು ಪತ್ರ ಬರೆದಿದ್ದು ಜಿಲ್ಲಾಡಳಿತದ ಪರವಾನಗಿ ಇಲ್ಲದೇ ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯನಿರತ ವೈದ್ಯಾಧಿಕಾರಿಗಳ ಶಿಫಾರಸು ಪತ್ರ ಪಡೆದು ತೆರಳಲು ಅವಕಾಶ ಮಾಡಿಕೊಡಬೇಕು ಎಂದು ವಿನಂತಿಸಿದ್ದೇನೆ..ಅದಕ್ಕೆ ಮುಖ್ಯಮಂತ್ರಿ ಗಳು ಸ್ಪಂದಿಸಿ ಅವಕಾಶ ಮಾಡಿಕೊಡುತ್ತಾರೆ ಎಂದು ಭರವಸೆ ಇದೆ ಎಂದು
ಶಾಸಕರು ತಿಳಿಸಿದ್ದಾರೆ…