ಕೊರೋನಾ ಸೋಂಕು ಇಂದು ವಿಶ್ವಕ್ಕೆ ಮಾರಕವಾಗಿ ಪರಿಣಮಿಸುತ್ತಿರುವ ಸಂದರ್ಭದಲ್ಲಿ ಇದರ ವಿರುದ್ಧ ಜನತೆಯ ರಕ್ಷಣೆಯಲ್ಲಿ ಕೆಲವು ಇಲಾಖೆ ಸಿಬ್ಬಂದಿಗಳು ಕೊರೋನಾ ವಾರಿಯರ್ಸ್ ಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ….ಅವರಲ್ಲಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಪ್ರಮುಖರು, ಇವರು ಮನೆ ಮನೆಗಳಿಗೆ ಭೇಟಿನೀಡಿ ದತ್ತಾಂಶ ಸಂಗ್ರಹಿಸಿ, ತಳಮಟ್ಟದಿಂದಲೆ ಕೊರೋನಾ ನಿರ್ಮೂಲನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಅವರ ಕರ್ತವ್ಯಕ್ಕೆ ಸಹಕರಿಸುವುದರ ಜೊತೆಗೆ ಅವರನ್ನು ಅಭಿನಂಧಿಸವುವ ಕಾರ್ಯ ಕಾಂಗ್ರೆಸ್ ಮುಖಂಡರಿಂದ ನಡೆಯುತ್ತಿದೆ.

RELATED ARTICLES  ಕುಮಟಾ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಹಾಗೂ ಲಾಂಛನ ಬಿಡುಗಡೆ.


ಅದರಂತೆ ಹೊನ್ನಾವರದ ಕಡತೋಕ, ಚಂದಾವರ ಹಾಗೂ ನವಿಲಗೋಣ ಪಂಚಾಯತ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಕಡತೋಕ ಇಲ್ಲಿನ ಸಿಬ್ಬಂದಿಗಳಿಗೆ(ಓಟ್ಟೂ 65 ಕ್ಕೂ ಹೆಚ್ಚು) ದಿ.ಮೋಹನ್ ಕೆ.ಶೆಟ್ಟಿ ಟ್ರಸ್ಟ್ ವತಿಯಿಂದ ಕ್ಷೇತ್ರದ ಮಾಜಿ ಶಾಸಕಿಯರಾದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ದಿನಸಿ ಸಾಮಗ್ರಿಗಳ ಕಿಟ್ ವಿತರಿಸಿ, ಅವರ ಅವಿರತ ಕಾರ್ಯವನ್ನು ಅಭಿನಂಧಿಸಿದರು…

RELATED ARTICLES  ರಾಜ್ಯ ಮಟ್ಟದ ಡಾಕ್ ಸೇವಾ ಪ್ರಶಸ್ತಿಗೆ ಮಂಗಲಾ ಭಾಗ್ವತ ಸಿರ್ಸಿ ಆಯ್ಕೆ

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶಿವಾನಂದ ಹೆಗಡೆ, ವೈಧ್ಯಾಧಿಕಾರಿಗಳು, ಮುಖಂಡರಾದ ರವಿಕುಮಾರ್ ಎಂ.ಶೆಟ್ಟಿ, ಎಂ.ಎಸ್.ಹೆಗಡೆ, ಶ್ರೀನಾಥ ಶೆಟ್ಟಿ, ಕಿರಣ ಭಂಡಾರಿ, ರಮೇಶ ಶೆಟ್ಟಿ, ರಾಜೇಶ ಗುನಗಾ, ಲಂಬೋದರ ನಾಯ್ಕ, ವಿನಾಯಕ ಶೇಟ್, ಪಿ.ಎಂ.ನಾಯ್ಕ, ಮುಂತಾದವರು ಹಾಜರಿದ್ದರು….