ಕುಮಟಾ: ಕೋವಿಡ್-19 ಕೊರೋನಾ ಮಹಾಮಾರಿ ದೇಶಾದ್ಯಂತ ತನ್ನ ಭೀಕರತೆಯನ್ನು ಪ್ರದರ್ಶಿಸುತ್ತಿದೆ. ಈ ಹಿನ್ನೆಲೆ ವೈದ್ಯರು, ಪೊಲೀಸರು, ಗೃಹರಕ್ಷಕ ದಳದ ಸಿಬ್ಬಂಧಿಗಳು, ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಕೊರೊನಾ ವಿರುದ್ದ ವಾರಿಯರ್ಸ್‌ ನಂತೆ ನಿಂತು ಹಗಲಿರುಳು ಹೋರಾಟ ನಡೆಸುತ್ತಿದ್ದು ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ ಹಾಗೂ ಜಿ.ಪಂ ಸದಸ್ಯೆ ವೀಣಾ ಸೂರಜ್ ನಾಯ್ಕ ದಂಪತಿಗಳು ಮಾಸ್ಕ್, ಟವೆಲ್ ಹಾಗೂ ಅಗತ್ಯ ವಸ್ತುಗಳನ್ನೊಳಗೊಂಡ ಕಿಟ್ ವಿತರಿಸುವ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

ಕುಮಟಾ ಪೊಲೀಸ್ ಠಾಣೆ, ಗೋಕರ್ಣ ಪೊಲೀಸ್ ಠಾಣೆ, ಹೊನ್ನಾವರ ಪೊಲೀಸ್ ಠಾಣೆ, ಹಿರೇಗುತ್ತಿ ಉಪಠಾಣೆ ಹಾಗೂ ಕತಗಾಲ ಉಪಠಾಣೆ ಸೇರಿದಂತೆ ತಾಲೂಕಿನಾದ್ಯಂತ ಅವರಿತ ಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಮಾಸ್ಕ್, ಟವೆಲ್ ಹಾಗೂ ಕಿಟ್ ವಿತರಿಸಲು ನಿರ್ಧರಿಸಿದ ಅವರು, ಶುಕ್ರವಾರ ತಾಲೂಕಾ ಆರೋಗ್ಯಾಧಿಕಾರಿಗಳ ಕಛೇರಿಗೆ ಭೇಟಿ ನೀಡಿ ಸುಮಾರು 154 ಆಶಾ ಕಾರ್ಯಕರ್ತೆಯರಿಗಾಗಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗಾಗಿ ಅವುಗಳನ್ನು ತಾಲೂಕಾ ವೈದ್ಯಾಧಿಕಾರಿ ಡಾ.ಆಜ್ಞಾ ನಾಯಕ ಅವರಿಗೆ ಹಸ್ತಾಂತರಿಸಿದರು. ನಂತರ ಕುಮಟಾ ಪೊಲೀಸ್ ಠಾಣೆಗೆ ಭೇಟಿ ನೀಡಿ ಪಿಎಸೈ ಆನಂದ ಮೂರ್ತಿ ಹಾಗೂ ಕ್ರೈಂ ಪಿಎಸೈ ಸುಧಾ ಹರಿಕಂತ್ರ ಅವರ ಮುಖಾಂತರ ಠಾಣೆಯ ಎಲ್ಲಾ ಸಿಬ್ಬಂಧಿಗಳಿಗಾಗಿ ಕಿಟ್ ಹಸ್ತಾಂತರಿಸಿದರು.

RELATED ARTICLES  ಕೇಂದ್ರ ಕಾರಾಗ್ರಹದಲ್ಲಿಯೇ ಖೈದಿ ಆತ್ಮಹತ್ಯೆ! ,ಕಾರವಾರದಲ್ಲಿ ನಡೆಯಿತು ಘಟನೆ.

ಈ ವೇಳೆ ಪತ್ರಿಕೆಯೊಂದಿಗೆ ಮಾತನಾಡಿದ ಅವರು,” ಇಡೀ ದೇಶ ತತ್ತರಿಸಿರುವ ಈ ಸಂಧರ್ಭದಲ್ಲಿ ಆಶಾಕಾರ್ಯಕರ್ತೆಯರು ಜನರಿಗೆ ಆಶಾ ಕಿರಣವಾಗಿ ನಿಂತಿದ್ದಾರೆ. ವೈದ್ಯರು, ಪೊಲೀಸರು ಹಾಗೂ ಕಂದಾಯ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳು ಇವರೆಲ್ಲರ ಸೇವೆ ದೇಶಕ್ಕೆ ವಿಶೇಷ ಕೊಡುಗೆಯಾಗಿದೆ. ತಮ್ಮ ಜೀವವನ್ನು ಲೆಕ್ಕಿಸದೇ ಪಣಕ್ಕಿಟ್ಟು ಕಾರ್ಯನಿರ್ವಹಿಸುತ್ತಿದ್ದಾರೆ. ಇವರೆಲ್ಲರಿಗೆ ನಾವು ಯಾವುದಾದರೂ ಒಂದು ರೀತಿಯಲ್ಲಿ ಅಭಿನಂದನೆ ಸಲ್ಲಿಸಬೇಕು ಎಂಬ ನಿಟ್ಟಿನಲ್ಲಿ ಮಾಸ್ಕ್, ಟಾವೆಲ್ ಹಾಗೂ ಕಿಟ್ ಹಸ್ತಾಂತರಿಸಿದ್ದೇವೆ. ಅಲ್ಲದೇ ಈ ಮೂಲಕ ಅವರೊಂದಿಗೆ ನಾವಿದ್ದೇವೆ ಎಂಬ ಭರವಸೆಯನ್ನು ನೀಡಿದ್ದೇವೆ “ಎಂದರು.

RELATED ARTICLES  ತಂದೆಯ ಅಂತ್ಯಕ್ರಿಯೆ ನಡೆಸಿದ ಪುತ್ರಿಯರು.

ಈ ವೇಳೆ ಜಿ.ಪಂ ಸದಸ್ಯೆ ವೀಣಾ ಸೂರಜ್ ನಾಯ್ಕ, ಸುದರ್ಶನ ಶಾನಭಾಗ, ನಾಗರಾಜ ಪಟಗಾರ, ಶ್ರೀಧರ ನಾಯ್ಕ ಸೇರಿದಂತೆ ಇತರರು ಇದ್ದರು.