ಕುಮಟಾ : ನವ ಪರ್ವ ಫೌಂಡೇಶನ್( ರಿ) ಬೆಂಗಳೂರು ಇದರ ಮಂಗಳೂರು ಘಟಕದವರು ಏರ್ಪಡಿಸಿದ್ದ ರಾಜ್ಯ ಮಟ್ಟದ ನ್ಯಾನೋ ಕಥೆ ಆನ್ಲೈನ್ ಸ್ಪರ್ಧೆಯಲ್ಲಿ ಡಾ .ರವೀಂದ್ರ ಭಟ್ ಸೂರಿ ಪ್ರಥಮ ಸ್ಥಾನ ಗಳಿಸಿದ್ದಾರೆ. ‘ಹೆಣ್ಣು’ ವಿಷಯದ ಮೇಲೆ ನಡೆದ ಈ ನ್ಯಾನೋ ಕಥೆ ಸ್ಪರ್ಧೆಯಲ್ಲಿ ರಾಜ್ಯದ ಹಲವು ಜಿಲ್ಲೆಗಳ ಕತೆಗಾರರು ಭಾಗವಹಿಸಿದ್ದರು.

RELATED ARTICLES  ನಾಗರಾಜ ನಾಯಕ ತೊರ್ಕೆಯವರ ಕಾರ್ಯ ಶ್ಲಾಘನೀಯ: ಶ್ರೀಕಲಾ ಶಾಸ್ತ್ರಿ

ಸಂಘಟನೆಯ ಅಧ್ಯಕ್ಷರಾದ ಪ್ರೊಫೆಸರ್ ಮುರುಳೀಧರ್ ಕೆ ಎಸ್, ಉಪಾಧ್ಯಕ್ಷರಾದ ಮಾನಸ ಪ್ರವೀಣ್ ಭಟ್ ಹಾಗೂ ಇತರೆ ಸದಸ್ಯರು ಸ್ಪರ್ಧೆಯನ್ನು ವ್ಯವಸ್ಥಿತವಾಗಿ ಸಂಘಟಿಸಿದ್ದರು . ವೃತ್ತಿಯಲ್ಲಿ ಶಿಕ್ಷಕರಾಗಿದ್ದು ಪ್ರವೃತ್ತಿಯಿಂದ ಸಾಹಿತಿ, ಕವಿ ,ಲೇಖಕರಾಗಿರುವ ಡಾ ರವೀಂದ್ರ ಭಟ್ ಸೂರಿ ಅವರು ಇತ್ತೀಚೆಗೆ “ಹನಿ ಹನಿ ಇಬ್ಬನಿ” ಅವರು ಸಂಘಟಿಸಿದ್ದ ಆನ್ಲೈನ್ ಹನಿಗವನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಗಮನ ಸೆಳೆದಿದ್ದರು.

RELATED ARTICLES  ಕರಡಿ ದಾಳಿ ವ್ಯಕ್ತಿಗೆ ಗಂಭೀರ ಗಾಯ

ಸತ್ವಾಧಾರ ಫೌಂಡೇಶನ್ ಜಿಲ್ಲಾ ಸಮನ್ವಯಾಧಿಕಾರಿಗಳಾದ ಇವರ ಯಶಸ್ಸಿಗೆ ಸತ್ವಾಧಾರ ಬಳಗ ಸಂತಸ ವ್ಯಕ್ತಪಡಿಸಿ ಅಭಿನಂದಿಸಿದೆ.