ಕುಮಟಾ : ಯೋಧರು ಗಡಿಯಲ್ಲಿ ನಿಂತು ದೇಶರಕ್ಷಣೆಯಲ್ಲಿ ತೊಡಗಿರುವಂತೆ, ಕೊರೋನಾ ಸೋಂಕು ಇಂದು ವಿಶ್ವಕ್ಕೆ ಮಾರಕವಾಗಿ ಪರಿಣಮಿಸುತ್ತಿರುವ ಸಂದರ್ಭದಲ್ಲಿ ಇದರ ವಿರುದ್ಧ ಜನತೆಯ ರಕ್ಷಣೆಯಲ್ಲಿ ಕೆಲವು ಇಲಾಖೆ ಸಿಬ್ಬಂದಿಗಳು ಕೊರೋನಾ ವಾರಿಯರ್ಸ್ ಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ..ಅವರಲ್ಲಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಪ್ರಮುಖರು, ಇವರು ಮನೆ ಮನೆಗಳಿಗೆ ಭೇಟಿನೀಡಿ ದತ್ತಾಂಶ ಸಂಗ್ರಹಿಸಿ, ತಳಮಟ್ಟದಿಂದಲೆ ಕೊರೋನಾ ನಿರ್ಮೂಲನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಅವರ ಕರ್ತವ್ಯಕ್ಕೆ ಸಹಕಾರಿಸುವುದರ ಜೊತೆಗೆ ಅವರಿಗೆ ಅಭಿನಂಧಿಸುವುದ ಹೆಮ್ಮೆಯ ವಿಷಯವಾಗಿದೆ.
ಅದರಂತೆ ಕುಮಟಾದ ತೊರ್ಕೆ, ನಾಡುಮಾಸ್ಕೇರಿ ಹಾಗೂ ಹನೇಹಳ್ಳಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ, ಆರೋಗ್ಯ ಸಹಾಯಕಿಯರಿಗಗೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಹನೇಹಳ್ಳಿ ಇಲ್ಲಿನ ಸಿಬ್ಬಂದಿಗಳಿಗೆ(ಓಟ್ಟೂ 70 ಕ್ಕೂ ಹೆಚ್ಚು) ದಿ.ಮೋಹನ್ ಕೆ.ಶೆಟ್ಟಿ ಟ್ರಸ್ಟ್ ವತಿಯಿಂದ ಕ್ಷೇತ್ರದ ಮಾಜಿ ಶಾಸಕಿಯರಾದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ದಿನಸಿ ಸಾಮಗ್ರಿಗಳ ಕಿಟ್ ವಿತರಿಸಿ, ಅವರ ಅವಿರತ ಕಾರ್ಯವನ್ನು ತುಂಬು ಹೃದಯದ ಅಭಿನಂದನೆ ಸಲ್ಲಿಸಿಿದವರು.
ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷರಾದ ವಿ.ಎಲ್.ನಾಯ್ಕ, ಪಂಚಾಯತ್ ಅಧ್ಯಕ್ಷರುಗಳಾದ ಸುಮಿತ್ರಾ ಗೌಡ, ಹನೀಫ್ ಸಾಬ್, ಜಯಂತ ನಾಯ್ಕ, ಮುಖಂಡರಾದ ರವಿಕುಮಾರ್ ಎಂ.ಶೆಟ್ಟಿ, ನಾಗರಾಜ್ ನಾಯ್ಕ, ದೇವು ಆಗೇರ, ದೇವೇಂದ್ರ ಗೌಡ, ಮನೋಜ ನಾಯಕ, ಸಂತೋಷ ನಾಯ್ಕ ಮುಂತಾದವರು ಹಾಜರಿದ್ದರು….