ಹಾವೇರಿ : ಚುನಾವಣೆಗೆ  ಎರಡು ತಿಂಗಳು ಬಾಕಿ ಇರುವಾಗ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ ಮಾಡಲಾಗುವುದು ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.

ನಗರದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆಗೂ ಮುನ್ನ ಮಾತನಾಡಿದ ಅವರು, ಮಾಜಿ ಸಿಎಂ ಕುಮಾರಸ್ವಾಮಿ ಸೆಪ್ಟೆಂಬರ್ ಅಂತ್ಯದ ಒಳಗಾಗಿ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಆದರೆ ಕೆಲವು ಅಭ್ಯರ್ಥಿಗಳ ಪಟ್ಟಿಯನ್ನು ಬೇಗ ಬಿಡುಗಡೆ ಮಾಡಿದರೆ ಗೊಂದಲ ಉಂಟಾಗುತ್ತದೆ. ಹೆಸರು ಪ್ರಕಟವಾಗದ ಕ್ಷೇತ್ರಗಳ ಅಕಾಂಕ್ಷಿಗಳು ಮನೆಗೆ ಬರುತ್ತಾರೆ. ಇದರಿಂದ ತೊಂದರೆ, ಅಸಮಾಧಾನಗಳು ಶುರುವಾಗುತ್ತದೆ ಎಂದರು.

RELATED ARTICLES  ಪ್ರವಾಹದಿಂದ ಬಸ್‌ಗಳ ಸಂಚಾರ ರದ್ದು: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಒಟ್ಟು 3.42 ಕೋಟಿ ರೂ. ನಷ್ಟ.

ಹಿರಿಯ ಮುಖಂಡರ ನೇತೃತ್ವದಲ್ಲಿ ಆರು ತಂಡಗಳನ್ನು ರಚಿಸಿ ಅಭ್ಯರ್ಥಿಗಳ ಮಾಹಿತಿ ಸಂಗ್ರಹಿಸಲಾಗುವುದು. ಆರು ತಂಡಗಳು ನೀಡಿದ ವರದಿಯ ನಂತರ ಹಿರಿಯ ಮುಖಂಡರೆಲ್ಲ ಕುಳಿತು ಅಭ್ಯರ್ಥಿಗಳನ್ನು ಅಂತಿಮಗೊಳಿಸುತ್ತೇವೆ ಎಂದು ಹೇಳಿದರು.

ಎರಡೂ ರಾಷ್ಟ್ರೀಯ ಪಕ್ಷಗಳಲ್ಲಿ ಆರ್ಥಿಕ ಬಲವಿದೆ. ನಾವು ಹೋರಾಟದ ಮೂಲಕ ಸಂಘಟನೆ ಮಾಡುತ್ತೇವೆ. ಕುಮಾರಸ್ವಾಮಿ ಮತ್ತು ನಾನು ಮಾಡಿದ ಕೆಲಸಗಳು ಹಾಗೂ ರೈತರ ಸಾಲಮನ್ನಾ ಎಂಬ ವಿಷಯವನ್ನಿಟ್ಟುಕೊಂಡು ಚುನಾವಣೆ ಎದುರಿಸುತ್ತೇವೆ.

RELATED ARTICLES  ಪದ್ಮಾವತಿ ವಿವಾದ: ನ.28ರಂದು ಸುಪ್ರೀಂ ವಿಚಾರಣೆ.

ಈ ವೇಳೆ ನವಲಗುಂದ ಶಾಸಕ ಎನ್.ಎಚ್.ಕೋನರೆಡ್ಡಿ, ವಿಧಾನ ಪರಿಷತ್ ಸದಸ್ಯ ಶರವಣ, ಮುಖಂಡರಾದ ಜಫ್ರುಲ್ಲಾಖಾನ, ಜೆಡಿಎಸ್ ಜಿಲ್ಲಾಧ್ಯಕ್ಷ ಅಶೋಕ ಬೇವಿನಮರ ಸೇರಿದಂತೆ ಜಿಲ್ಲೆಯ ಮುಖಂಡರು ಹಾಜರಿದ್ದರು