ಯಲ್ಲಾಪುರ : ಪ್ರತಿಭಾನ್ವಿತ ಜಿಲ್ಲಾ ಮಟ್ಟದ ಕಬಡ್ಡಿ ಆಟಗಾರ , ರಾಜ್ಯ ಜೂನಿಯರ್ ಕಬಡ್ಡಿ ತಂಡಕ್ಕೆ ಆಯ್ಕೆಯಾಗಿದ್ದ ತಾಲೂಕಿನ ಮದನೂರು ಪಂಚಾಯತಿ ವ್ಯಾಪ್ತಿಯ ಮಾದೇಕೊಪ್ಪ ನಿವಾಸಿ ಮಣಿಕಂಠ ಜನ್ನು ಪಾಂಡರಮಿಸಿ ( 18 ) ಕಾಲುಜಾರಿ ಮಾದೇವಕೊಪ್ಪ ಕೆರೆಯಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ .
ಮದನೂರು ಪಂಚಾಯಿತಿ ಮಾಜಿ ಸದಸ್ಯ ಜನ್ನು ಪಾಂಡರಮೀಸೆಯವರ ಮಗನಾಗಿದ್ದ ಈತ , ಕಿರಿಯ ವಯಸ್ಸಿನಲ್ಲಿಯೇ ಕಬ್ಬಡ್ಡಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದ , ಭವಿಷ್ಯದ ಭಾರತದ ಕಬ್ಬಡ್ಡಿ ಆಟಗಾರನೆಂದು ಆತನನ್ನು ಬಿಂಬಿಸಲಾಗುತ್ತಿತ್ತು
ನಂತರ ಯಲ್ಲಾಪುರ ಅಗ್ನಿಶಾಮಕ ದಳದವರನ್ನು ಸ್ಥಳಕ್ಕೆ ಕರೆಯಿಸಿ , ಮೃತದೇಹವನ್ನು ಕೆರೆಯಿಂದ ಮೇಲೆತ್ತಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಶವಾಗಾರಕ್ಕೆ ಭೇಟಿ ನೀಡಿದ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ , ಸಾಮಾಜಿಕ ಕಾರ್ಯಕರ್ತ ವಿಜಯ ಮಿರಾಶಿ , ಉದ್ಯಮಿ ಬಾಲಕೃಷ್ಣ ನಾಯಕ , ನಾಗರಾಜ ನಾಯ್ಕ ಅರಬೈಲ ಮುಂತಾದವರು ಮೃತನ ಅಂತಿಮ ದರ್ಶನ ಪಡೆದು ಕುಟುಂಬದವರಿಗೆ ಸಾಂತ್ವನ ಹೇಳಿದರು.
Source: UKExpress