ಹೊನ್ನಾವರ:ಧಾರವಾಡದ ಕರ್ನಾಟಕ ವಿಶ್ವಾವಿದ್ಯಾಲಯದಲ್ಲಿ ಸಾಂಶೋಧನಾ ವಿದ್ಯಾರ್ಥಿಯಾಗಿದ್ದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಮೂಲದ ಸುದೀಪ್ ಖೈರನ್ ತನ್ನ ಕೊಠಡಿಯಲ್ಲಿ ಸಾವನ್ನಪ್ಪಿದ್ದು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.
ಮೃತ ವಿದ್ಯಾರ್ಥಿ ಪಕ್ಕದಲ್ಲೇ ಸ್ಯಾನಿಟೈಸರ್ ಹಾಗೂ ಕೆಮ್ಮಿನ ಔಷಧಿಯ ಬಾಟಲ್ ಪತ್ತೆಯಾಗಿದ್ದು, ಆತ ಸೈನಿಟೈಸರ್ ಕುಡಿದು ಸಾವನ್ನಪ್ಪಿರಬಹುದೆಂದೂ ಅಂದಾಜಿಸಲಾಗಿದೆಯಾದರೂ ನಿಖರತೆ ಇಲ್ಲ.
ಆದತೆ ಸ್ಯಾನಿಟೈಸರ್ ಕುಡಿದಿದ್ದಾನೆ ಎನ್ನುವುದು ಸುಳ್ಳು’ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.
ಈತನ ಮರಣೋತ್ತರ ಪರೀಕ್ಷೆಯ ವರದಿಯ ಬಳಿಕ ಸತ್ಯಾಸತ್ಯತೆ ಹೊರಬರಬೇಕಿದೆ.