ಕುಮಟಾ : ಇಲ್ಲಿನ ಎಪಿಎಂಸಿ ಪ್ರಾಂಗಣದಲ್ಲಿ ಎಪ್ರಿಲ್ ೨೯ ಬುಧವಾರದಿಂದ ಅಡಕೆ ವ್ಯಾಪಾರ ಪ್ರಾರಂಭಿಸಲಾಗುವುದು ಎಂದು ಉಪವಿಭಾಗಾಧಿಕಾರಿ ಅಜಿತ್ ಎಂ. ರೈ ಹಾಗೂ ಎಪಿಎಂಸಿ ಅಧ್ಯಕ್ಷ ರಾಮನಾಥ ಶಾನಭಾಗ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರತಿದಿನ ೧ ರಿಂದ ೨೫ ರ ತನಕ ಮಾತ್ರ ಅಡಕೆ ರಾಶಿ ಮಾಡಲಾಗುತ್ತಿದ್ದು ಸಾಧ್ಯವಾದಷ್ಟು ರೈತರು ಅಡಕೆ ಕಳುಹಿಸಿ ದೂರವಾಣಿ ಮೂಲಕ ಮಾರಾಟ ಖಚಿತಪಡಿಸಬೇಕು, ಅನಗತ್ಯವಾಗಿ ರೈತರು ಬರಬಾರದು. ಏಕಕಾಲಕ್ಕೆ ಕೇವಲ ೪ ವರ್ತಕರಿಗೆ ಮಾತ್ರ ಅಂಗಡಿಗಳಲ್ಲಿ ಟೆಂಡರ್ ಬರೆಯಲು ಅವಕಾಶ ನೀಡಲಾಗುತ್ತದೆ. ಹಸಿ(ಫ್ಯಾಕ್ಟರಿ)ಅಡಕೆ ಮಾರಾಟವಿಲ್ಲ. ಅಡಕೆ ಆವಕ ಹೆಚ್ಚಾದಲ್ಲಿ ಪ್ರತಿದಿನ ಮಾರಾಟ ವ್ಯವಸ್ಥೆ ಕಲ್ಪಿಸಲಾಗುವುದು. ಕ್ಯಾಂಪ್ಕೋ ಕೂಡಾ ಅಡಕೆ ನೇರ ಖರೀದಿ ನಡೆಸಿದ್ದು ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.