ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಶರಾವತಿ, ಅಘನಾಶಿನಿ ಮತ್ತು ಗಂಗಾವಳಿ ನದಿ ಪಾತ್ರಗಳಲ್ಲಿ ಗುರುತಿಸಿದ ಮರಳು ದಿಬ್ಬಗಳಲ್ಲಿ ಮೇ.4 ರಿಂದ ತೆಗೆಯಲು ತಾತ್ಕಾಲಿಕ ಅನುಮತಿ ನೀಡಿದ್ದೇವೆ ಎಂದು ಜಿಲ್ಲಾಧಿಕಾರಿ ಹಾಗೂ ಸಿಆರ್‌ಝಡ್ ಜಿಲ್ಲಾ ಸಮಿತಿ ಅಧ್ಯಕ್ಷರೂ ಆಗಿರುವ ಡಾ.ಹರೀಶಕುಮಾರ್.ಕೆ ತಿಳಿಸಿದ್ದಾರೆ.
ಜಿಲ್ಲೆಯ ಪ್ರಮುಖ ಈ ಮೂರು ನದಿಗಳ ದಿಬ್ಬದಲ್ಲಿ ಮರಳು ತೆರವು ಮಾಡಲು ರಾಜ್ಯ ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಕಳೆದ ಮಾ. 12ರಂದು ಕರಾವಳಿ ನಿಯಂತ್ರಣ ವಲಯ ನಿರಾಕ್ಷೇಪಣಾ ಪತ್ರ ನೀಡಿದೆ. ಹೀಗಾಗಿ ಇಂದು ಜಿಲ್ಲಾ 07 ಸದಸ್ಯರ ಕರಾವಳಿ ನಿಯಂತ್ರಣ ವಲಯ (ಸಿಆರೈಡ್) ಸಮಿತಿ ಸಭೆ ನಡೆಸಿ, ಮರಳು ದಿಬ್ಬಗಳಿಂದ ಮರಳು ತೆರವುಗೊಳಿಸಲು ತಾತ್ಕಾಲಿಕ ಪರವಾನಿಗೆ ವಿತರಿಸುವ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.