ಕೊರೋನಾ ಸೋಂಕು ಇಂದು ವಿಶ್ವವ್ಯಾಪಿ ಹರಡುತ್ತಿರುವಂತೆ, ಸರ್ಕಾರ ಸೋಂಕು ನಿಯಂತ್ರಣಕ್ಕಾಗಿ ಲಾಕ್ಡೌನ ಕೈಗೊಂಡಿದೆ. ಲಾಕ್ಡೌನ್ ನಿಂದ ಜನರು ಮನೆಯಲ್ಲಿದ್ದರೆ, ಅನೇಕ ಇಲಾಖೆಯ ಸಿಬ್ಬಂದಿಗಳು ಈ ಸೋಂಕು ನಿರ್ಮೂಲನೆಯಲ್ಲಿ ಕೊರೋನಾ ವಾರಿಯರ್ಸ್ ಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಲ್ಲಿ ಆಶಾ ಕಾರ್ಯಕರ್ತೆ ಯರು, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಸಹಾಯಕಿಯರು ಪ್ರಮುಖರು. ತಮ್ಮ ವ್ಯಾಪ್ತಿಯಲ್ಲಿನ ಪ್ರತಿಯೊಂದು ಮನೆಗಳಿಗೆ ಭೇಟಿನೀಡಿ, ದತ್ತಾಂಶ ಸಂಗ್ರಹಿಸಿ, ತಳಮಟ್ಟದಲ್ಲಿಯೇ ಕೊರೋನಾ ನಿರ್ಮೂಲನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ
ಅದೇ ರೀತಿ ಇಂತಹ ಕುಮಟಾ ಪಟ್ಟಣ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ತಾಲೂಕಾ ಆರೋಗ್ಯಾಧಿಕಾರಿಗಳ ಕಛೇರಿ ಕುಮಟಾ ಇಲ್ಲಿನ ಸಿಬ್ಬಂದಿಗಳಿಗೆ ( 50ಕ್ಕೂ ಹೆಚ್ಚಿನ ಜನರಿಗೆ) ದಿ.ಮೋಹನ್ ಕೆ.ಟ್ರಸ್ಟ್ ವತಿಯಿಂದ ಕ್ಷೇತ್ರದ ಮಾಜಿ ಶಾಸಕಿಯರಾದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ದಿನಸಿ ಸಾಮಗ್ರಿಗಳ ಕಿಟ್ ವಿತರಿಸಿ, ಅಭಿನಂಧಿಸಿದರು….
ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿಗಳಾದ ಆಜ್ಞಾ ನಾಯಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿ.ಎಲ್.ನಾಯ್ಕ, ಮುಖಂಡರಾದ ಮಧುಸೂದನ್ ಶೇಟ್, ಎಂ.ಟಿ.ನಾಯ್ಕ, ಅನಿತಾ ಮಾಪಾರಿ, ಮನೋಜ ನಾಯ್ಕ, ಗಣಪತಿ ಶೆಟ್ಟಿ, ನಿತ್ಯಾನಂದ ನಾಯ್ಕ, ಗಣೇಶ ಶೆಟ್ಟಿ, ಕೃಷ್ಣ ದೇವಳಿ, ದತ್ತು ಶೆಟ್ಟಿ, ಮನೋಜ ನಾಯಕ, ಮುಂತಾದವರು ಹಾಜರಿದ್ದರು..