ಕುಮಟಾ ಉಪವಿಭಾಗದಲ್ಲಿ ದಿ :01/05/2020 ರಿಂದ ಎಂದಿನಂತೆ ಎಲ್ಲಾ ಸ್ಥಾವರಗಳ ಮೀಟರ್ ರೀಡಿಂಗ್ ಕಾರ್ಯವನ್ನು ಕಂಪನಿಯ ನಿರ್ದೇಶನದಂತೆ ನಿರ್ವಹಿಸಲಾಗುವುದು. ಹಾಗಾಗಿ ಗ್ರಾಹಕರು ದಯಮಾಡಿ ಸಹಕರಿಸಬೇಕಾಗಿ ವಿನಂತಿಸಲಾಗಿದೆ. ಒಂದೊಮ್ಮೆ ವಿದ್ಯುತ್ ಮಾಪಕಗಳು ಕಟ್ಟಡದ ಒಳಗಡೆ ಇದ್ದಲ್ಲಿ ಗ್ರಾಹಕರೇ ಖುದ್ದು ಮಾಪಕದ ರೀಡಿಂಗ್ ಅನ್ನು ಮಾಪಕ ಓದುಗರು ಬಂದಾಗ ನೀಡಿದ್ದಲ್ಲಿ ಅವರು ನೀಡಿದಂತಹ ರೀಡಿಂಗ್ ಗೆ ವಿದ್ಯುತ್ ಬಿಲ್ಲನ್ನು ನೀಡಲಾಗುವುದು. ಇಲ್ಲದಿದ್ದಲ್ಲಿ ನಮ್ಮ ಸಿಬ್ಬಂದಿಗಳ ಹಿತದೃಷ್ಟಿಯಿಂದ ಮಾಪಕಗಳು ಒಳಗೆ ಇರುವ ಸ್ಥಾವರಗಳಿಗೆ ಸರಾಸರಿ ಬಿಲ್ಲನ್ನೇ ನೀಡಲಾಗುವುದು.
ಬಿಲ್ಲಿಂಗ್ ಮಾಡುವಾಗ ನಮ್ಮ ಮೀಟರ್ ರೀಡರ್ ರವರಿಗೆ ಕರೋನ ಸೋಂಕು ಹರಡುವುದನ್ನು ತಡೆಯಲು ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಲಾಗಿದೆ ಅಂದರೆ ಮೀಟರ್ ರೀಡಿಂಗ್ ಮಾಡುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಮತ್ತು ಗ್ಲೌಸ್ ಬಳಸುವುದು ಹಾಗೂ ಸಾಮಾಜಿಕ ಅಂತರವನ್ನು ಕಾಪಾಡುವುದು. ದಯವಿಟ್ಟು ಗ್ರಾಹಕರು ಸಹಕರಿಸಲು ಮತ್ತು ವಿದ್ಯುತ್ ಬಾಕಿಯನ್ನು ಆದಷ್ಟು ಆನ್ಲೈನ್ ಮುಖಾಂತರವೇ ಪಾವತಿಸಲು ಕೋರಲಾಗಿದೆ .