ನವದೆಹಲಿ: ಕೊರೋನಾ ಲಾಕ್ ಡೌನ್ ಅನ್ನು ಮೇ 17ರವರೆಗೂ ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಕೊರೋನಾ ಸೋಂಕು ಹರಡುವುದನ್ನು ನಿಯಂತ್ರಿಸುವ ಸಲುವಾಗಿ ಕೇಂದ್ರ ಸರ್ಕಾರ ಎರಡು ಬಾರಿ ಲಾಕ್ ಡೌನ್ ಘೋಷಿಸಿತ್ತು. ಇದೀಗ ಮೂರನೇ ಬಾರಿಗೆ 2 ವಾರಗಳವರೆಗೂ ಲಾಕ್ ಡೌನ್ ವಿಸ್ತರಿಸಿ ಆದೇಶ ಹೊರಡಿಸಿದೆ.
ಕೇಂದ್ರ ಗೃಹ ಸಚಿವಾಲಯ ಇದೀಗ ಕೊರೋನಾ ಲಾಕ್ ಡೌನ್ ಅನ್ನು ವಿಸ್ತರಿಸಿದ್ದು ಮೂರು ಜೋನ್ ಗಳಾಗಿ ವಿಂಗಡಿಸಿದೆ. ಆರೆಂಜ್ ಮತ್ತು ಗ್ರೀನ್ ಜೋನ್ ಗಳಲ್ಲಿ ಕೆಲ ಸಡಿಲಿಕೆಗಳನ್ನು ನೀಡಿದ್ದು ರೆಡ್ ಜೋನ್ ನಲ್ಲಿ ಎಂದಿನಂತೆ ಲಾಕ್ ಡೌನ್ ಮಾರ್ಗಸೂಚಿ ಆದೇಶ ಮುಂದುವರೆಯಲಿದೆ.
Source: K.prabha