ಮುಂಡಗೋಡ : ಹುಬ್ಬಳ್ಳಿ ಹೊಸೂರ ಮೂಲದ ವೆಂಕಟೇಶ ಮಲ್ಲಸಮುದ್ರ, ಅಶ್ವಿನಿ ಬಂಡಿವಾಡ ದಂಪತಿ ನೇಣು ಬಿಗಿದು ತಾಲ್ಲೂಕಿನ ಬಾಚಣಕಿ ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿ ಆತ್ಮಹತ್ಯೆ‌ ಮಾಡಿಕೊಂಡಿರುವುದು ಗುರುವಾರ ಕಂಡುಬಂದಿದೆ. ದಡಭಾಗದಲ್ಲಿರುವ ಮರವೊಂದಕ್ಕೆ ನೈಲಾನ್ ಹಗ್ಗ ಕಟ್ಟಿ, ಒಂದೇ ಹಗ್ಗದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಸಿಪಿಐ ಕಿರಣಕುಮಾರ ನಾಯಕ, ಪಿಎಸ್ಐ ಲಕ್ಕಪ್ಪ ನಾಯ್ಕ ಭೇಟಿ ನೀಡಿದ್ದು, ಮೃತ ದಂಪತಿಗಳ ಕುಟುಂಬಸ್ಥರ ಆಗಮನಕ್ಕೆ ಕಾಯುತ್ತಿದ್ದಾರೆ.
ದಂಪತಿ, ನಮ್ಮ ಸಾವಿಗೆ ಯಾರೂ ಕಾರಣರಲ್ಲ. ಯಾರಿಗೂ ತೊಂದರೆ ಕೊಡಬೇಡಿ ಎಂದು ಬರೆದಿರುವ ಚೀಟಿ ಮೃತ ಹುಡುಗನ ಕಿಸೆಯಲ್ಲಿ ಪತ್ತೆಯಾಗಿದ್ದು, ಚೀಟಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಟವೇರಾ ವಾಹನದಲ್ಲಿ ಜಲಾಶಯಕ್ಕೆ ಆಗಮಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

RELATED ARTICLES  ಕುಮಟಾದಲ್ಲಿ ಕರೋನಾ ವೈರಸ್ : ಸತ್ಯಾ ಸತ್ಯತೆ ತಿಳಿಯದೆ ಜನತೆ ಕಂಗಾಲು.