ಕುಮಟಾ: ತಾಲೂಕಿ ಬಾಡ ಗ್ರಾಮಪಂಚಾಯದ ಸದಸ್ಯರಾದ ಹರೀಶ ನಾಯ್ಕರವರು ಲಾಕ ಡೌನ್ ವೇಳೆ ತಮ್ಮ ಭಾಗದ ಜನರಿಗೆ ಉತ್ತಮವಾಗಿ ಸ್ಪಂದಿಸುವುದರ ಮೂಲಕ ಎಲ್ಲರಮೆಚ್ಚುಗೆಗೆ ಪಾತ್ರರಾಗಿದ್ದಾರೆ.ಗ್ರಾಮಪಂಚಾಯದ ಟಾಸ್ಕಪೋರ್ಸ ಸದಸ್ಯರಾಗಿ ಪ್ರತಿದಿನವೂ ಈ ಭಾಗದಲ್ಲಿ ಸಂಚರಿಸುವವರ ಬಗ್ಗೆ ನಿಗಾ ವಹಿಸುತ್ತಿರುವುದಲ್ಲದೇ
ಜನರಿಗೆ ನಿತ್ಯೋಪಯೋಗಿ ವಸ್ತುಗಳಾದ ಹಣ್ಣು ತರಕಾರಿಗಳ ವಾಹನವು ತಮ್ಮ ಕ್ಷೇತ್ರಕ್ಕೆ ಬರುವಂತೆ ಮಾಡಿ ತಾವೇ ಖುದ್ದಾಗಿ ನಿಂತು ಎಲ್ಲರೂ ಸರದಿಯಲ್ಲೇ ಖರೀದಿಸುವಂತೆ ಪ್ರಯತ್ನ ಪಟ್ಟಿದ್ದಾರೆ.
ಅನಾರೋಗ್ಯಕ್ಕೆ ಒಳಗಾದವರಿಗೆ ಅಗತ್ಯವಾಗಿ ಬೇಕಾದ ಔಷಧ ಮುಂತಾದ ವಸ್ತುಗಳನ್ನು ಅಂಗಡಿಯಿಂದ ನೇರವಾಗಿ ಅವರ ಮನೆಗಳಿಗೆ ತಂದುಕೊಟ್ಟು ಸಹಾಯ ಮಾಡುತಿದ್ದಾರೆ.ಹರೀಶ ನಾಯ್ಕರ ಈ ಕಾರ್ಯಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿರುತ್ತಾರೆ.ಸದಾ ಹಸನ್ಮುಖಿ ಮಿತಭಾಷಿ ಹರೀಶ ನಾಯ್ಕ ಒಬ್ಬ ಉತ್ತಮ ಜನಪ್ರತಿನಿಧಿ ಎಂದು ಹೆಸರುಮಾಡಿ ಜನಮನ ಗೆಲ್ಲುತ್ತಿದ್ದಾರೆ.