ಕುಮಟಾ: ತಾಲೂಕಿನ ಸಂತೇಗುಳಿ ಮತ್ತು ಸೊಪ್ಪಿನಹೊಸಳ್ಳಿ ಪಂಚಾಯತ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಸಂತೇಗುಳಿ ಇಲ್ಲಿನ ಸಿಬ್ಬಂದಿಗಳಿಗೆ(ಒಟ್ಟು 45 ಕ್ಕೂ ಜನರಿಗೆ) ದಿ.ಮೋಹನ್ ಕೆ.ಟ್ರಸ್ಟ್ ವತಿಯಿಂದ ಕ್ಷೇತ್ರದ ಮಾಜಿ ಶಾಸಕಿಯರಾದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ದಿನಸಿ ಸಾಮಗ್ರಿಗಳ ಕಿಟ್ ವಿತರಿಸಿ, ಅವರ ಕಾರ್ಯವನ್ನು ಶ್ಲಾಘಿಸಿದರು….
ಈ ಸಂದರ್ಭದಲ್ಲಿ ವೈದ್ಯಾಧಿಕಾರಿಗಳು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿ.ಎಲ್.ನಾಯ್ಕ, ಪಂಚಾಯತ್ ಅಧ್ಯಕ್ಷರಾದ ಮಹೇಶ ನಾಯ್ಕ, ಮುಖಂಡರಾದ ರಮೇಶ್ ನಾಯ್ಕ, ರೇವತಿ ನಾಯ್ಕ, ಮುಜಾಫರ್ ಸಾಬ್,ಪುಷ್ಪಾ ನಾಯ್ಕ, ವಾಮನ ನಾಯ್ಕ, ಸುಧಾಕರ ನಾಯ್ಕ, ಆಯುಬ್ ಸಾಬ್, ಸಂತೋಷ ನಾಯ್ಕ, ಮನೋಜ ನಾಯಕ, ನಿತ್ಯಾನಂದ ನಾಯ್ಕ, ದತ್ತು ಶೆಟ್ಟಿ ಮುಂತಾದವರು ಹಾಜರಿದ್ದರು…